ಕಾಂಗ್ರೆಸ್ ನ ಈಗಿನ ಸ್ಥಿತಿಗೆ “ಆ” ಶಾಪ ಕಾರಣ : ಜೆಡಿಎಸ್‍ಗೆ ಮೋದಿ ಆಫರ್
ಹಾಸನ : ಹೆಚ್ ಡಿ ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೇವಲ 10 ತಿಂಗಳಲ್ಲಿ ಅಧಿಕಾರದಿಂದ ಕೆಳಗಿಸಿದ್ರಲ್ಲ ಆ ಶಾಪವೇ ಇವತ್ತಿನ ಕಾಂಗ್ರೆಸ್ ಸರ್ವನಾಶಕ್ಕೆ ಕಾರಣ ಎಂದು ಶಾಸಕ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ರೇವಣ್ಣ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಧಿಕಾರಕ್ಕಾಗಿ ನಾವೇನು ಕಾಂಗ್ರೆಸ್ ನವರ ಮನೆ ಬಾಗಿಲಿಗೆ ಹೋಗಿರಲಿಲ್ಲ.
ಅವರೇ ನಮ್ಮ ಮನೆ ಬಾಗಿಲಿಗೆ ಬಂದು ಕುಮಾರಣ್ಣನವರೇ ಸಿಎಂ ಆಗಿ, ದೇವೇಗೌಡರೇ ನಿಮ್ಮ ಮಗನನ್ನು ಸಿಎಂ ಮಾಡುತ್ತೇವೆ ಎಂದು ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದರು.
ಆದ್ರೆ ಇಂದು ನಮಗೆ ಈ ಪರಿಸ್ಥಿತಿ ಬಂದಿದೆ ಅಂದ್ರೆ ಅದಕ್ಕೆ ಕಾಂಗ್ರೆಸ್‍ನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದೇ ಕಾರಣ.
ಕೇವಲ 14 ತಿಂಗಳಲ್ಲಿ ಕೆಳಗಿಳಿಸಿ ಅನ್ಯಾಯ ಮಾಡಿದ್ರಲ್ಲ, ಅಂತಹವರ ಜೊತೆ ಕುಮಾರಣ್ಣ ಹೋಗಿದ್ದೆ ತಪ್ಪಾಯ್ತು ಎಂದು ಕಿಡಿಕಾರಿದರು.
ಇದೇ ವೇಳೆ ಜೆಡಿಎಸ್ ಗೆ ಮೋದಿ ಆಫರ್ ಕೊಟ್ಟಿದ್ದ ಬಗ್ಗೆ ಬಹಿರಂಗ ಪಡಿಸಿದ ರೇವಣ್ಣ, ಮೈತ್ರಿ ಸರ್ಕಾರ ಪತನದ ಬಳಿಕ ಮೋದಿಯವರು ನೀವು ರಾಜೀನಾಮೆ ಕೊಟ್ಟು ಬನ್ನಿ ಮತ್ತೆ ನಿಮಗೆ ಅದೇ ಸೀಟ್ ಕೊಡುತ್ತೇವೆ ಅಂತಾ ಕುಮಾರಸ್ವಾಮಿಗೆ ಆಫರ್ ಕೊಟ್ಟಿದ್ದರು.
ಆದ್ರೆ ನಾವು ಆಂತಹ ಪಾಪದ ಕೆಲಸಕ್ಕೆ ನಾವು ಕೈ ಹಾಕಲಿಲ್ಲ. ಈಗ ಕಾಂಗ್ರೆಸ್ ನವರು ನಮ್ಮ ಜೊತೆ ಸಹವಾಸ ಬೇಡ ಎನ್ನುತ್ತಿದ್ದಾರೆ.
ನಾನು ಅವರಲ್ಲಿ ಕೇಳುವುದು ಒಂದೇ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ವರಿಷ್ಠರು ಹೇಳಲಿ, ಆವಾಗ ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
