ವಿದೇಶಿ ಮಹಿಳೆಯೊಬ್ಬಳು ಟ್ರಾಫಿಕ್ ಜಾಮ್ ಇದ್ದ ಪ್ರದೇಶದಲ್ಲಿಯೇ ಕಾರಿನ ಬಾನೆಟ್, ಟಾಪ್ ಮೇಲೆ ಹತ್ತಿ ಕುಳಿತು ವಿಚಿತ್ರವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ವಾರಣಾಸಿಯ ಮಾಂಡುವಾಡಿಹ್ ಕ್ರಾಸ್ ರಸ್ತೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸಂಚಾರ ದಟ್ಟಣೆಯಿಂದ ನಿಧಾನವಾಗಿ ತೆರಳುತ್ತಿರುವ ಕಾರಿನ ಬಾನೆಟ್ ಹತ್ತಿ, ಟಾಪ್ ಮೇಲೆ ಕುಳಿತುಕೊಂಡು ಅನುಚಿತವಾಗಿ ಈ ಮಹಿಳೆ ವರ್ತಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ವಿಚಿತ್ರವಾಗಿ ವರ್ತಿಸಿರುವ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ, ಮಹಿಳೆ ಯಾವ ಕಾರಣಕ್ಕೆ ಈ ರೀತಿ ವರ್ತಿಸಿದ್ದಾರೆ ಎಂಬ ಕುರಿತು ತಿಳಿದು ಬಂದಿಲ್ಲ. ಇದಕ್ಕೂ ಮುನ್ನ ಮಹಿಳೆಯೊಬ್ಬರು ದಿಢೀರ್ ಎಂದು ಆಗಮಿಸಿ, ಬೈಕ್ ಸವಾರರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.