ಭೋಪಾಲ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಯೊಬ್ಬ ನದಿಗೆ ಹಾರಿದ ಪ್ರಕರಣವೊಂದು ನಡೆದಿದೆ.
ಈ ಘಟನೆ ಮದ್ಯಪ್ರದೇಶದ ಶಿಯೋಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಖಾನ್ ಎಂಬ ಆರೋಪಿಯೇ ಈ ರೀತಿ ನದಿಗೆ ಹಾರಿ ತಲೆ ಮರೆಸಿಕೊಂಡಿದ್ದಾನೆ. ಖಾನ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು.
ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವುದಕ್ಕಾಗಿ ಖಾನ್ ನದಿಗೆ ಹಾರಿದ್ದಾನೆ. ಅಲ್ಲಿಂದ ಈಜಿಕೊಂಡು ಬೇರೆ ಕಡೆಗೆ ತೆರಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನದಿಗೆ ಜಿಗಿದು ಈಜುತ್ತಾ ತಪ್ಪಿಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಖಾನ್ ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.








