ಮೈಸೂರು: ವ್ಯಕ್ತಿಯೊಬ್ಬ ಕ್ರೈಂ ಬ್ರ್ಯಾಂಚ್ ಪೊಲೀಸ್ (Crime Branch Police) ಎಂದು ಹೇಳಿಕೊಂಡು ಹಣ ವಸೂಲಿ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬೈಲಕುಪ್ಪೆ ಪೊಲೀಸರು (Bylakuppe Police) ಆರೋಪಿಯನ್ನು ಬಂಧಿಸಿದ್ದಾರೆ. ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಮಧುವನಹಳ್ಳಿ ನಿವಾಸಿ ದಿವ್ಯರಾಜ್ ಬಂಧಿತ ಆರೋಪಿ. ಬಂಧಿತ ವ್ಯಕ್ತಿ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದ. ವ್ಯಕ್ತಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಪ್ಪ ಗ್ರಾಮದಲ್ಲಿನ ಆಯುರ್ವೇದಿಕ್ ಸ್ಪಾ ಮಾಲೀಕ ಪುಷ್ಪ ಕುಮಾರ್ ಬಳಿ ಆರೋಪಿ ದಿವ್ಯರಾಜ್ ತಾನೊಬ್ಬ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.