ನಟಿ ನಯನತಾರಾ (Nayanthara) ಅವರು ಧನುಷ್ (Dhanush) ವಿರುದ್ಧ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.
ನಯನತಾರಾ ಮದುವೆಯ ಸಾಕ್ಷ್ಯಚಿತ್ರಕ್ಕೆ ‘ನಾನುಮ್ ರೌಡಿ ಧಾನ್’ ಚಿತ್ರದ ಕ್ಲಿಪ್ ಬಳಸಿದ್ದಕ್ಕೆ ಧನುಷ್ ಲೀಗಲ್ ನೋಟಿಸ್ ನೀಡಿದ್ದಾರೆ. ಇದರ ಬೆನ್ನಲ್ಲೇ ನಟಿ, ಬಹಿರಂಗ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಯನತಾರಾ ನಟನೆಯ ‘ನಾನುಮ್ ರೌಡಿ ಧಾನ್’ (Naanum Rowdy Dhaan) ಚಿತ್ರಕ್ಕೆ ಧನುಷ್ ನಿರ್ಮಾಪಕರಾಗಿದ್ದರು. ಕೆಲವು ಕ್ಲಿಪ್ಗಳನ್ನು ನಯನತಾರಾ ಮದುವೆಯ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲು ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕೆ ಧನುಷ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೆಟ್ಫ್ಲಿಕ್ಸ್ಗಾಗಿಯೇ ಮಾಡಿರೋ ಈ ಸಾಕ್ಷ್ಯಚಿತ್ರದಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ರಿಲೀಸ್ ಆದ್ಮೇಲೆ ಧನುಷ್ ಅವರಿಂದ ನಟಿಗೆ ಲೀಗಲ್ ನೋಟಿಸ್ ಬಂದಿದೆ. 3 ಸೆಕೆಂಡ್ ವಿಡಿಯೋ ಬಳಸಿದ್ದಕ್ಕೆ 10 ಕೋಟಿ ಡ್ಯಾಮೇಜ್ ಕ್ಲೇಮ್ ಮಾಡಲಾಗಿದೆ ಎಂದು ನಯನತಾರಾ ಲೆಟರ್ ನಲ್ಲಿ ಬರೆದಿದ್ದಾರೆ.
ಈ ಸಾಕ್ಷ್ಯಚಿತ್ರಕ್ಕೆ ನಿಮ್ಮ ಚಿತ್ರದ ಕೆಲವು ಕ್ಲಿಪ್ಸ್ ಬಳಸಿಕೊಳ್ಳುತ್ತೇವೆ ಎಂದು 2 ವರ್ಷಗಳ ಹಿಂದೆಯೇ NOC ಕೂಡ ಕೇಳಿದ್ದೇವು. NOC ಕೊಡದ ನೀವು ಟ್ರೈಲರ್ ರಿಲೀಸ್ ಆದ್ಮೇಲೆ ಲೀಗಲ್ ನೋಟಿಸ್ ಕಳಿಸೋದು ಎಷ್ಟು ಸರಿ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಲೀಗಲ್ ನೋಟಿಸ್ ಗೆ ನಟಿ ಸಾಮಾಜಿಕ ಜಾಲತಾಣದಲ್ಲೇ ಉತ್ತರ ನೀಡಿದ್ದರು, ಅಲ್ಲದೇ ಧನುಷ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.








