ತಾಯಿಯಾಗಲಿದ್ದಾರೆ ಚೆಲುವಿನ ಚಿತ್ತಾರದ ನಟಿ ಅಮೂಲ್ಯ
ಚಂದನವನದ ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹಾಗಂತ ಅಮೂಲ್ಯ ಹೊಸ ಸಿನಿಮಾ ಮಾಡ್ತಿರಾ? ಮತ್ತೆ ಕಮ್ ಬ್ಯಾಕ್ ಮಾಡುತ್ತಾರ ಅಂತ ಅಂದುಕೊಳ್ಳಬೇಡಿ. ಯಾಕೆಂದರೆ ಇದು ಅದಕ್ಕಿಂತ ಹೆಚ್ಚಿನ ಸಿಹಿ ಸುದ್ದಿ.
ನಟಿ ಅಮೂಲ್ಯ ತಾಯಿ ಆಗುತಲಿದ್ದಾರೆ. ಅಮೂಲ್ಯ ಮತ್ತು ಜಗದೀಶ್ ದಂಪತಿ ಇನ್ನು ಕೆಲವೆ ತಿಂಗಳಲ್ಲಿ ಮಗುವಿನ ಪೋಷಕರಾಗುತ್ತಿದ್ದಾರೆ.
ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಮೂಲಕ ಅಮೂಲ್ಯ ರಿವೀಲ್ ಮಾಡಿದ್ದಾರೆ. ಇನ್ನು ಜಗದೀಶ್ ಅವರು ಕೂಡ ಟ್ವಿಟ್ಟರ್ ಮೂಲಕ ಈ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ನಾವೀಗ ಕೇವಲ ಇಬ್ಬರಲ್ಲ’ ಎಂಬ ಕ್ಯಾಪ್ಷನ್ ಮೂಲಕ ಅಮೂಲ್ಯ ಖುಷಿ ವಿಚಾರವನ್ನ ಹಂಚಿಕೊಂಡಿದ್ದಾರೆ. ಪ್ರೆಗ್ನೆನ್ಸಿ ಅನೌನ್ಸ್ ಬಗ್ಗೆ ಸ್ಪೆಷಲ್ ಆಗಿ ಪೊಟೋಶೂಟ್ ಮಾಡಿಸಿಕೊಂಡಿರುವ ಜೋಡಿ ಈ ಬೇಸಿಗೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.