ಅದ್ಭುತ ತಂಡವು ಟ್ರೋಫಿ ಗೆಲುವಿಗೆ ಅರ್ಹ : ವಿಲಿಯಮ್ಸನ್
ದುಬೈ : ಅದ್ಭುತ ತಂಡವು ಟ್ರೋಫಿ ಗೆಲುವಿಗೆ ಅರ್ಹವಾಗಿದೆ ಎಂದು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಟಿ20 ವಿಶ್ವಕಪ್ ಫೈನಲ್ ನಲ್ಲಿ ಆಸೀಸ್ ಗೆದ್ದು ವಿಶ್ವ ಚಾಂಪಿಯನ್ಸ್ ಆಗಿದೆ. ಪಂದ್ಯದ ಬಳಿಕ ಸೋಲಿನ ಬಳಿಕ ಮಾತನಾಡಿದ ಕೇನ್ ವಿಲಿಯಮ್ಸನ್, ಟೂರ್ನಿ ಉದ್ದಕ್ಕೂ ನಮ್ಮ ಬೌಲಿಂಗ್ ಭಾರಿ ಬಲಿಷ್ಠವಾಗಿತ್ತು.
ಅಲ್ಲದೇ ಪ್ರತಿ ಮೈದಾನ, ಹಾಗೂ ಇತರ ತಂಡಗಳಿಗೆ ನಾವು ಹೊಂದಿಕೊಳ್ಳುವುದು ಅಗತ್ಯವಾಗಿರುತ್ತದೆ. ದೊಡ್ಡ ಪಂದ್ಯಾವಳಿಗಳಲ್ಲಿ ಇದು ಅನಿಮಾರ್ಯ.
ಅದೇ ರೀತಿ ಫೈನಲ್ ನಲ್ಲಿ ಗೆಲ್ಲಲು ಎಲ್ಲರೂ ಕೂಡ ಅತ್ಯುತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿರುತ್ತಾರೆ.
ಆದರೆ, ಆಸ್ಟ್ರೇಲಿಯಾ ತಂಡವು ಉತ್ಕ್ರಷ್ಟ ಆಟ ತೋರಿತು. ಅವರು ನಿಜವಾಗಿಯೂ ಬಹಳ ಉತ್ತಮವಾಗಿ ಆಡಿದರಲ್ಲದೇ, ನಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು ಎಂದು ಹೇಳಿದರು.
ಅಲ್ಲದೆ ಸೋಲಿನಿಂದ ನಿರಾಸೆ ಮೂಡಿಸಿದೆ. ಉತ್ತಮ ಪ್ರದರ್ಶನ ತೋರಿದ ಆಸ್ಟ್ರೇಲಿಯಾ, ಪಂದ್ಯದ ಕೊನೆಯವರೆಗೂ ಹಿಡಿತ ಸಾಧಿಸಿತು. ಅದ್ಭುತ ತಂಡವು ಟ್ರೋಫಿ ಗೆಲುವಿಗೆ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಟಿ 20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಕಿವೀಸ್, 173 ರನ್ ಗಳಿಸಿತು.
ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ವಾರ್ನರ್, ಮಾಶ್ ಬ್ಯಾಟಿಂಗ್ ನೆರವಿನಿಂದ ಏಂಟು ವಿಕೆಟ್ ಗಳ ಗೆಲುವು ಸಾಧಿಸಿತು.
ಆ ಮೂಲಕ ಚೊಚ್ಚಲ ಬಾರಿಗೆ ಐಸಿಸಿ ಟಿ 20 ವಿಶ್ವಕಪ್ ಚಾಂಪಿಯನ್ಸ್ ಆಗಿದೆ.