ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಬುಧವಾರ ಹೆಣ್ಣು ಮಗು ಜನಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಕೇಶ್ ಪುತ್ರಿ ಇಶಾ ಅಂಬಾನಿ ಹೆಣ್ಣು ಮತ್ತು ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ಮೂರನೇ ಬಾರಿಗೆ ಮುಕೇಶ್ ಮತ್ತು ಪತ್ನಿ ನೀತಾ ಅಂಬಾನಿ ಅಜ್ಜ ಅಜ್ಜಿ ಎನ್ನಿಸಿಕೊಂಡಿದ್ದಾರೆ.
ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲಿಯೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇವರ ದುಬಾರಿ ಖಾಸಗಿ ಮನೆಯನ್ನು ಆಂಟಿಲಿಯಾ ಎಂದು ಕರೆಯಲಾಗುತ್ತದೆ. 27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂಬವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ.
ಈ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು. ಮನೆಯ ಬೆಲೆ 15,000 ಕೋಟಿ ಎನ್ನಲಾಗುತ್ತಿದೆ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ. ಅಂಟಿಲಿಯಾದಲ್ಲಿ 600 ಜನ ಕೆಲಸಗಾರರು ಇದ್ದಾರೆ. ಒಟ್ಟು 600 ಮಂದಿ 27 ಫ್ಲೋರ್‌ನ ಅಂಟಿಲಾ ಬಂಗಲೆಯಲ್ಲಿ ಕೆಲಸ ಮಾಡುತ್ತಾರೆ. ಕಸ ಗುಡಿಸಲು, ಒರೆಸಲು, ಬಟ್ಟೆ ಒಗೆಯಲು, ಅಡುಗೆ ಮಾಡಲು ಇಲ್ಲಿ ಪ್ರತ್ಯೇಕವಾಗಿ ಹಲವು ಜನ ಇದ್ದಾರೆ.
ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂ. ಸ್ಯಾಲರಿ ಪಡೆಯುತ್ತಾರೆ. ಅಂಟಿಲಿಯಾದಲ್ಲಿ ಈ ಕೆಲಸಗಾರರು ಉಳಿದುಕೊಳ್ಳಲೆಂದೇ ಸರ್ವೆಂಟ್ ಕ್ವಾರ್ಟರ್ಸ್ ಎಂಬ ಜಾಗವಿದೆ. ಇಲ್ಲಿ ಕೆಲಸಗಾರರು ಉಳಿದುಕೊಳ್ಳಬಹುದಾಗಿದೆ. ಅಂಟಿಲಿಯಾದಲ್ಲಿ ಕೆಲಸ ಮಾಡುವವರು ಪ್ರಸಿದ್ಧ ಕಂಪೆನಿಯಿಂದ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.