ಮಾಜಿ ರೂಪದರ್ಶಿಯು ಹೋಟೆಲ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮೃತ ದೇಹ ಪತ್ತೆಯಾಗಿದೆ.
ಮಾಜಿ ರೂಪದರ್ಶಿ ದಿವ್ಯಾ ಪಹುಜಾ(Divya Pahuja) ದೇಹ ಪತ್ತೆಯಾಗಿದೆ. ಹರಿಯಾಣದ ತೊಹ್ನಾದಲ್ಲಿನ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮಾಜಿ ರೂಪದರ್ಶಿ ಕೊಲೆಯಾಗಿ 12 ದಿನಗಳ ನಂತರ ಪತ್ತೆಯಾಗಿದೆ. ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಜ. 2ರಂದು ಹೋಟೆಲ್ ನಲ್ಲಿ ದಿವ್ಯಾಳನ್ನು ಆಕೆಯ ಸ್ನೇಹಿತ ಮತ್ತು ಹೋಟೆಲ್ ಮಾಲೀಕ ಅಭಿಜೀತ್ ಹತ್ಯೆ ಮಾಡಿದ್ದರು ಎನ್ನಲಾಗಿದೆ.
ಕೊಲೆಯಾದ ನಂತರ ಶವವನ್ನು ಬಿಎಂಡಬ್ಲ್ಯು ಕಾರಿನಲ್ಲಿಟ್ಟು ಅಭಿಜೀತ್ ಸಹಚರರು ಹಾಕಿಕೊಂಡು ಪರಾರಿಯಾಗದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದರು. ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡಿದ್ದ ಬಾಲ್ರಾಜ್ ಗಿಲ್ ನ್ನು ವಿಮಾನ ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿರುವ ಸಂದರ್ಭದಲ್ಲಿ ಬಂಧಿಸಲಾಗಿತ್ತು.