ಲೈಂಗಿಕ ದೌರ್ಜನ್ಯಕ್ಕೆ ಬೇಸತ್ತ ಬಾಲಕನೊಬ್ಬ ಟ್ಯೂಟರ್ ನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆಗ್ನೇಯ ದೆಹಲಿಯ ಬಾಟ್ಲಾ ಹೌಸ್ ನಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸರ್ಕಾರಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಬಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಹೀಗಾಗಿ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಟ್ಯೂಟರ್ ಖಾಸಗಿ ಟ್ಯುಟೋರಿಯಲ್ನಲ್ಲಿ ಶಿಕ್ಷಕರಾಗಿದ್ದರು. ಜಾಕಿರ್ ನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆದರೆ, ಆತ ಅವಿವಾಹಿತನಾಗಿದ್ದ ನ್ನಲಾಗಿದೆ.
ಟ್ಯೂಟರ್ ಕೆಲವು ದಿನಗಳ ಹಿಂದೆ ಉದ್ಯಾನದಲ್ಲಿ ಬಾಲಕನನ್ನು ಬೇಟಿಯಾಗಿದ್ದರು. ಬಾಲಕನಿಗೆ ತಿಂಡಿ ತಿನಿಸುಗಳನ್ನು ಕೊಡಿಸಿ, ಮನೆಗೆ ಕರೆದುಕೊಂಡು ಬಂದಿದ್ದ. ಮನೆಗೆ ಹೋದ ಸಂದರ್ಭದಲ್ಲಿ ಕೆಲವು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ. ನಂತರ ತಾನು ಹೇಳಿದಂತೆ ಕೇಳದಿದ್ದರೆ ವಿಡಿಯೋವನ್ನು ಬಹಿರಂಗಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದ. ಪದೇ ಪದೇ ಲೈಂಗಿಕ ದೌರ್ಜನ್ಯದಿಂದ ಬೇಸತ್ತ ಬಾಲಕ ಅವಕಾಶ ಸಿಕ್ಕಾಗ ವ್ಯಕ್ತಿಯನ್ನು ಕೊಲ್ಲಬೇಕೆಂದು ನಿರ್ಧರಿಸಿದ್ದ. ಹರಿತವಾದ ಪೇಪರ್ ಕಟರ್ನಲ್ಲಿ ಕುತ್ತಿಗೆ ಸೀಳಿದ್ದ, ನಂತರ ವ್ಯಕ್ತಿಯ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.