ಪೋಷಕರು ಎಷ್ಟೇ ಎಚ್ಚರಿಕೆ ವಹಿಸಿದ್ದರು ಕೂಡ ಮಕ್ಕಳು ಏನಾದರೊಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ಇಲ್ಲೊಬ್ಬ ಬಾಲಕ ಕೂಡ ಆಟವಾಡುತ್ತ ಇಂತಹುದೇ ಒಂದು ಎಡವಟ್ಟು ಮಾಡಿಕೊಂಡಿದ್ದಾನೆ.
ಖಮ್ಮಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ಹಾಗೂ ಪಾಲಕರು ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುವುದು ಈ ಸುದ್ದಿಯಿಂದ ತಿಳಿದು ಬರಲಿದೆ. ಖಮ್ಮಂ ಜಿಲ್ಲೆಯ ಬದ್ವತ್ ಹರ್ಷ್ ಎಂಬ 6 ವರ್ಷದ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಂದು ಇಂಚು ಉದ್ದದ ಬೋಲ್ಟ್ ನುಂಗಿದ್ದಾನೆ. ಇದನ್ನು ಕಂಡ ಪೋಷಕರು ಆತಂಕಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಬೋಲ್ಟ್ ಇರುವುದನ್ನು ಪತ್ತೆ ಹಚ್ಚಿ, ಯಾವುದೇ ಶಸ್ತ್ರ ಚಿಕಿತ್ಸೆ ನಡೆಸದೆ ಎಂಡೋಸ್ಕೋಪಿ ಮೂಲಕ ಬೋಲ್ಟ್ ಹೊರ ತೆಗೆದಿದ್ದಾರೆ.
ಈ ಅವಧಿಯಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಪಾಲಕರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಕಿವಿ ಮಾತು ಹೇಳಿದ್ದಾರೆ.







