ಮೈಸೂರು: ಅಪಘಾತದಲ್ಲಿ (Accident) ತಲೆಗೆ ಗಂಭೀರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿ, ನಾಲ್ವರ ಬದುಕಿಗೆ ಆಸರೆಯಾಗಿರುವ ಘಟನೆಯೊಂದು ನಡೆದಿದೆ.
ಅಂಗಾಂಗ ದಾನ (Organ Donation) ಮಾಡಿ ಚಂದ್ರು ಎನ್ನುವವರು ನಾಲ್ವರ ಬಾಳಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೈಸೂರಿನ ಕೂರ್ಗಳ್ಳಿ ನಿವಾಸಿಯಾಗಿದ್ದ ಚಂದ್ರು (39) ಅವರಿಗೆ ಜು.19ರಂದು ಬೆಳಗ್ಗೆ ಹೆಬ್ಬಾಳ್ ಕೈಗಾರಿಕಾ ಪ್ರದೇಶದ ಇನ್ಫೋಸಿಸ್ ಹತ್ತಿರ ಅಪಘಾತವಾಗಿದೆ.
ಬೈಕ್‌ನಲ್ಲಿ ಹೋಗುವಾಗ ಎಲ್ ಪಿಜಿ ತುಂಬಿದ್ದ ಟ್ರಕ್ ನಡುವೆ ಅಪಘಾತ ಸಂಭವಿಸಿತ್ತು. ಚಂದ್ರುಗೆ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಿದುಳು ನಿಷ್ಕ್ರಿಯ ಹಿನ್ನೆಲೆ ಅಂಗಾಂಗ ದಾನ ಮಾಡಿದ್ದಾರೆ. ಚಂದ್ರುನ ಯಕೃತ್ತು, ಮೂತ್ರಪಿಂಡ ಕಾರ್ನಿಯಾಗಳ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ.








