ಲಕ್ನೋ: ಮದುವೆ ಮನೆಯಿಂದ ಯುವಕನೊಬ್ಬ ಪರಾರಿಯಾಗಲು ಯತ್ನಿಸಿದಾಗ ಬರೋಬ್ಬರಿ 20 ಕಿ.ಮೀ ಚೇಸ್ ಮಾಡಿ, ಆತನನ್ನು ಹಿಡಿದು ವಧು ಕಲ್ಯಾಣ ಮಂಟಪಕ್ಕೆ ಕರೆ ತಂದಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಎರಡು ವರ್ಷ ಪ್ರೀತಿಸಿ, ಇಬ್ಬರೂ ಮದುವೆಯಾಗಲು ಮುಂದಾಗಿದ್ದಾರೆ. ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ವರ ಪರಾರಿಯಾಗಲು ಯತ್ನಿಸಿದ್ದಾನೆ. ವಧು (Bride) 20 ಕಿ.ಮೀ ಚೇಸ್ ಮಾಡಿ ವರ (Groom) ನನ್ನು ಮಂಟಪಕ್ಕೆ ಕರೆ ತಂದಿದ್ದಾಳೆ.
ಪ್ರೀತಿಸಿದ ನಂತರ ಇಬ್ಬರೂ ಕುಟಂಬಸ್ಥರನ್ನು ಒಪ್ಪಿಸಿದ್ದರು. ಎಲ್ಲರೂ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ವಧು ಸಿದ್ಧವಾಗಿ ಕುಳಿತಿದ್ದಳು. ಆದರೆ, ವರ ಮಾತ್ರ ಬಂದಿರಲಿಲ್ಲ. ಕರೆ ಮಾಡಿದರೆ, ಆತ ಏನೇನೋ ಹೇಳಲು ಆರಂಭಿಸಿದ್ದ. ಹೀಗಾಗಿ ಬರೇಲಿಯಿಂದ ಸುಮಾರು 20 ಕಿಮೀ ದೂರದ ಭೀಮೋರಾ ಪೊಲೀಸ್ ಠಾಣೆ ಬಳಿ ಬಸ್ ಹತ್ತುವಾಗ ಆತನನ್ನು ಹಿಂಬಾಲಿಸಿ ಹಿಡಿದು ಕರೆ ತಂದಿದ್ದಾಳೆ. ಕೊನೆಗೆ ಇಬ್ಬರೂ ವಿವಾಹವಾಗಿದ್ದಾರೆ.