ಬೆಂಕಿ ಹೊತ್ತಿಸಿಕೊಂಡೇ 4 KM ಗಾಡಿ ಓಡಿಸಿದ ಟ್ರಕ್ ಚಾಲಕ
ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರಕ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಟ್ರಕ್ ಚಾಲಕ ಬೆಂಕಿಯೊಂದಿಗೆ ಟ್ರಕ್ ಓಡಿಸಿದ್ದಾನೆ. ಲಾರಿಯ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನಿಗೆ ವಿಷಯ ತಿಳಿಯುವಷ್ಟರಲ್ಲಿ ತಡವಾಗಿದೆ. ಸುಮಾರು 4 ಕಿಲೋಮೀಟರ್ ರಸ್ತೆಯಲ್ಲಿ ಬೆಂಕಿ ಹತ್ತಿಕೊಂಡೆ ಗಾಡಿ ಓಡಿದೆ.
ಮೇವು ತುಂಬಿದ ಐಚರ್ ಟ್ರಕ್ (MH 04 E-L 9383) ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಕನಿಷ್ಠ ನಾಲ್ಕು ಕಿಮೀವರೆಗೆ ಉರಿಯುತ್ತಲೇ ಇತ್ತು ಎಂದು ಪಾಲ್ಘರ್ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಪಾಲ್ಘರ್‌ನ ಶಿರ್ಸಾದ್ ಫಾಟಾ ಬಳಿ ಅಪಘಾತ ಸಂಭವಿಸಿದೆ. ಟ್ರಕ್ ಹೊತ್ತಿ ಉರಿಯುತ್ತಿರುವ ವಿಡಿಯೋ ಕೂಡ ಹೊರಬಿದ್ದಿದ್ದು, ಇದನ್ನು ದಾರಿಹೋಕರೊಬ್ಬರು ತಮ್ಮ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ರಸ್ತೆಯಲ್ಲಿ ಓಡುತ್ತಿರುವುದನ್ನು ಕಂಡು, ಜತೆಯಲ್ಲಿದ್ದ ವಾಹನದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.
ಯಾವುದೇ ಪ್ರಾಣಹಾನಿಯಾಗಿಲ್ಲ ಆದರೆ ಟ್ರಕ್ ಸಂಪೂರ್ಣವಾಗಿ ಸುಟ್ಟು ಹೋಗಿದೆ..