ಬೆಂಗಳೂರು: ಇತ್ತೀಚೆಗಷ್ಟೇ ನಗರದಲ್ಲಿನ ಡೇ ಕೇರ್ ಸೆಂಟರ್ (day care center) ನ 3ನೇ ಮಹಡಿಯಿಂದ ಮಗು ಬಿದ್ದು ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರಿತು ವರದಿಯಾಗಿತ್ತು. ಆದರೆ, ಈಗ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
ಕೇರಳ ಮೂಲದ ಟೆಕ್ಕಿ ದಂಪತಿ ಜಿಟೋ ಟಾಮಿ ಜೋಸೆಫ್, ಬಿನಿಟೋ ಥಾಮಸ್ ಪುತ್ರಿ ಜಿನಾ ಸಾವನ್ನಪ್ಪಿದ ಮಗು ಎನ್ನಲಾಗಿದೆ. ಜ. 22ರಂದು ಈ ಘಟನೆ ನಡೆದಿತ್ತು. ಖಾಸಗಿ ಫ್ರೀ ಸ್ಕೂಲ್ ಡೆಲ್ಲಿ ಸ್ಕೂಲ್ ನ ಮೂರನೇ ಮಹಡಿಯಿಂದ ಮಗು ಬಿದ್ದು, ತಲೆಗೆ ಪೆಟ್ಟಾಗಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಈ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಲೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.