ಇನ್ನೂ ಎರಡು ವರ್ಷಗಳ ಕಾಲ ಇರಲಿದೆ ಕರೋನಾ ರೂಪಾಂತರ
ಮುಂದಿನ ಎರಡು ವರ್ಷಗಳಲ್ಲಿ ಒಮಿಕ್ರಾನ್ಗಿಂತ ಬಲಶಾಲಿಯಾದ ಹೊಸ ಕೋವಿಡ್ ರೂಪಾಂತರದ ವೈರಸ್ ಹೊರಬರಬಹುದು ಎಂದು ಇಂಗ್ಲೆಂಡ್ನ ಮುಖ್ಯ ವೈದ್ಯಕೀಯ ಅಧಿಕಾರಿ ಕ್ರಿಸ್ ವಿಟ್ಟಿ ಎಚ್ಚರಿಸಿದ್ದಾರೆ. ಜಗತ್ತು ಕೋವಿಡ್ ಮುಕ್ತವಾಗಲು ಇನ್ನೂ ಬಹಳ ದೂರವಿದೆ ಎಂದು ಇಂಗ್ಲೆಂಡ್ನ ಮುಖ್ಯ ವೈದ್ಯಕೀಯ ಅಧಿಕಾರಿ ಕ್ರಿಸ್ ವಿಟ್ಟಿ ಹೇಳಿದ್ದಾರೆ.
ಕೋವಿಡ್ -19 ಶಾಶ್ವತವಾಗಿ ಉಳಿಯುತ್ತದೆ ಮತ್ತು ಯಾವಾಗಲೂ ಜ್ವರದಂತೆಯೇ ಸಾವಿನ ಬೆದರಿಕೆಗಳನ್ನ ಹೊಡ್ಡುತ್ತದೆ, ‘ಇನ್ನಷ್ಟು ಅಚ್ಚರಿಯ’ ವೈರಾಣುಗಳು ಉದ್ಭವಿಸಬಹುದು ಎಂದು ಕ್ರಿಸ್ ವಿಟ್ಟಿ ಹೇಳಿದ್ದಾರೆ. ಇದೇ ವೇಳೆ ಅವರು ನಮ್ಮ ಅಪಾಯದ ಸಮತೋಲನವನ್ನು ಗಮನಾರ್ಹವಾಗಿ ಬದಲಾಯಿಸಬಹುದು’ ಎಂದು ವಿಟ್ಟಿ ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಕೆಲವು ಹಂತದಲ್ಲಿ ಹೊಸ ರೂಪಾಂತರವು ನಮ್ಮ ಅಪಾಯದ ಸಮತೋಲನವನ್ನು ಗಮನಾರ್ಹವಾಗಿ ಬದಲಾಯಿಸುತ್ತದೆ ಅಂತ ಅವರು ಹೇಳಿದ್ದಾರೆ. ಇದೇ ವೇಳೆ ಕರೋನಾ ಕೇವಲ ಶೀತ-ಉಂಟುಮಾಡುವ ರೋಗಕಾರಕಕ್ಕೆ ರೂಪಾಂತರಗೊಳ್ಳುತ್ತದೆ ಎಂದು ಹೇಳಿದ್ದಾರೆ.
The Corona mutant is going to be their for another 2 years says England Chief medical officer