ನಾಗ್ಪುರ : ಸೊಸೆಯೊಬ್ಬಳು ಅತ್ತಿಗೆಯನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ ನಡೆದಿದೆ.
ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಮಹಿಳೆ ತಮ್ಮ ಮನೆಯಲ್ಲಿ 80 ವರ್ಷದ ಅತ್ತೆಯ ಮೇಲೆ ಹಲ್ಲೆ ನಡೆಸಿ, ಕತ್ತು ಸೀಳಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಧೆ ಲೇಔಟ್ ನಿವಾಸಿ 36 ವರ್ಷದ ಪೂನಂ ಆನಂದ ಶಿಖರವಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಕೊಲೆ ಮಾಡಿರುವ ಆರೋಪಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಅದಕ್ಕಾಗಿಯೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಳು. ಆದರೆ, ಕೆಲವು ದಿನಗಳಿಂದ ಔಷಧಿ ಸೇವಿಸಿರಲಿಲ್ಲ. ಹೀಗಾಗಿ ಆಗಾಗ ತನ್ನ ಕುಟುಂಬಸ್ಥರೊಂದಿಗೆ ಜಗಳವಾಡುತ್ತಿದ್ದಳು. ಹೀಗೆ ಕೋಪದ ಬರದಲ್ಲಿ ತಾರಾದೇವಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕತ್ತು ಸೀಳಿದ್ದಾಳೆ ಎನ್ನಲಾಗಿದೆ.