ಮರ್ಯಾದೆ ಹತ್ಯೆ | ಮಗಳನ್ನೇ ಕುಟುಂಬಸ್ಥರೇ ಬೆಂಕಿ ಹಚ್ಚಿ ಕೊಂದಿದ್ದಾರೆ Saaksha Tv
ಉತ್ತರ ಪ್ರದೇಶ: ಅನ್ಯ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕುಟುಂಬಸ್ಥರೇ ಬೆಂಕಿ ಹಚ್ಚಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
20 ವರ್ಷದ ಯುವತಿ ಮೃತ ದುರ್ದೈವಿ. ಯುವತಿ ಬ್ರಾಹ್ಮಣ ಜಾತಿಗೆ ಸೇರಿದ್ದು, ಯುವಕ ಸುಗಮ್ ಜಾಟ್ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ನಂತರ ಪ್ರೇಮಿಗಳು ಓಡಿ ಹೋಗಿದ್ದಾರೆ. ಇದರಿಂದಾಗಿ ಯುವತಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಯುವತಿ ಕುಟುಂಬದ ಸದಸ್ಯರು ಎಫ್ಐಆರ್ ಕೂಡಾ ದಾಖಲಿಸಿದ್ದರು.
ನಂತರ ಈ ದಂಪತಿ ಗುರುವಾರ ಮನೆಗೆ ವಾಪಸ್ಸಾಗಿದ್ದಾರೆ. ಬೊರಾಕಾಳ ಠಾಣೆ ವ್ಯಾಪ್ತಿಯ ಸಿಸೌಲಿ ಹಳ್ಳಿಯ ನೀರು ತುಂಬಿದ ಹೊಲದಲ್ಲಿ ಅರ್ಧ ಬೆಂದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದೆ. ನಂತರ ಯುವಕ ತನ್ನ ಪ್ರೇಯಸಿಯ ಹತ್ಯೆಯಾಗಿರಬಹುದೆಂಬ ಶಂಕೆಯಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಮೃತದೇಹ ಶಾಮ್ಲಿ ಜಿಲ್ಲೆಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಇದು ಮಾರ್ಯಾದ ಹತ್ಯೆ ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದು ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇರೆಗೆ ಯುವತಿ ತಾಯಿ ಮತ್ತು ಚಿಕ್ಕಪ್ಪನ್ನು ಬಂಧಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.