ಇಂದೋರ್: ವೈದ್ಯನೊಬ್ಬ, ರೋಗಿಗೆ ಥಳಿಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಇಂದೋರ್ ನಲ್ಲಿನ (Indore) ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತರಾವ್ ಆಸ್ಪತ್ರೆಯ (MYH) ಕಿರಿಯ ವೈದ್ಯರೊಬ್ಬರು ಎಚ್‌ಐವಿ ಸೋಂಕಿತ (HIV-infected) ವ್ಯಕ್ತಿಗೆ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ಹಿನ್ನೆಲೆಯಲ್ಲಿ ವೈದ್ಯರನ್ನು ಅಮಾನತು ಮಾಡಲಾಗಿದೆ. 45 ವರ್ಷದ ಎಚ್‌ಐವಿ ಸೋಂಕಿತ ವ್ಯಕ್ತಿಯನ್ನು ಉಜ್ಜಯಿನಿಯ ಆಸ್ಪತ್ರೆಯಿಂದ ಎಂವೈಎಚ್‌ಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡಲು ಕರೆದುಕೊಂಡು ಬರಲಾಗಿತ್ತು. ಚಿಕಿತ್ಸೆ ಆರಂಭಿಸುವುದಕ್ಕೂ ಮುನ್ನ ರೋಗಿ ಹೇಳದಿದ್ದಕ್ಕಾಗಿ ಕಿರಿಯ ವೈದ್ಯರು ಕೋಪಗೊಂಡಿದ್ದಾರೆ. ಕಿರಿಯ ವೈದ್ಯರು ರೋಗಿಗೆ ಸ್ಟ್ರೆಚರ್‌ನಲ್ಲಿ ನಿರಂತರವಾಗಿ ಕಪಾಳಮೋಕ್ಷ ಮಾಡಿ ಬೈಯುತ್ತಿರುವುದು ವಿಡಿಯೊದಲ್ಲಿದೆ.








