ವ್ಯಕ್ತಿಯೊಬ್ಬ ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲವೆಂದು ಆರೋಪಿಸಿ ವೈದ್ಯರಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಹಲವು ಬಾರಿ ವೈದ್ಯರಿಗೆ ಆರೋಪಿ ಇರಿದ ಪರಿಣಾಮ, ವೈದ್ಯರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಪೆರುಂಗಲತ್ತೂರಿನ ವಿಘ್ನೇಶ್ ಎಂದು ಗುರುತಿಸಲಾಗಿದೆ. ಈತ ಹೊರರೋಗಿ ಪ್ರವೇಶ ಪಾಸ್ ತೆಗೆದುಕೊಂಡು ಆಂಕೊಲಾಜಿ ವಿಭಾಗಕ್ಕೆ ಪ್ರವೇಶಿ ಡಾ. ಬಾಲಾಜಿ ಜಗನ್ನಾಥ್ ಎಂಬುವವರಿಗೆ ಇರಿದಿದ್ದಾನೆ. ವಿಘ್ನೇಶ್ ಅವರ ತಾಯಿ ಪ್ರೇಮಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ವಿಘ್ನೇಶ್ ಚಾಕುವಿನಿಂದ ಇರಿಯುತ್ತಿದ್ದಂತೆ ಅಲ್ಲಿದ್ದವರು ಕೂಡಲೇ ಹೋಗಿ ಬಿಡಿಸಿದ್ದಾರೆ. ದಾಳಿಯ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದು ಭದ್ರತಾ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.








