ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ರೈಲ್ವೆ ಹಳಿಗಳ ಮೇಲೆ ಲಾರಿ ನಿಲ್ಲಿಸಿದ ಘಟನೆ ನಡೆದಿದೆ.
ಲುಧಿಯಾನದ ರೈಲ್ವೆ ಹಳಿ ಮೇಲೆ ಟ್ರಕ್ ನಿಲ್ಲಿಸಿದ್ದು, ಲೋಕೋ ಪೈಲಟ್ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಈ ಮಾರ್ಗದಲ್ಲಿ ರೈಲು ಬರುವ 8 ನಿಮಿಷಗಳ ಹಿಂದೆ ಚಾಲಕ ಟ್ರಕ್ನ್ನು ಹಳಿ ಮೇಲೆ ನಿಲ್ಲಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಕ್ ಕಂಡ ಕೂಡಲೇ ಲೋಕೋಪೈಲಟ್ ರೈಲು ನಿಧಾನಗೊಳಿಸಿದ್ದಾರೆ. ಹಾಗೂ ಟ್ರಕ್ನಿಂದ ಕೆಲವು ಮೀಟರ್ ದೂರದಲ್ಲೇ ರೈಲನ್ನು ನಿಲ್ಲಿಸಿ, ಅಪಘಾತವನ್ನು ತಪ್ಪಿಸಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಟ್ರ್ಯಾಕ್‌ನಲ್ಲಿ ಟ್ರಕ್ ಅನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಟ್ರಕ್ ಅನ್ನು ಟ್ರ್ಯಾಕ್‌ನಿಂದ ಹೊರತೆಗೆದು ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರ ತಿಳಿಸಿದ್ದಾರೆ. ಇದರಿಂದಾಗಿ ಕೆಲವು ಹೊತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.