ಇಂಗ್ಲೆಂಡ್ (India vs England) ತಂಡ ಮೊದಲ ಟೆಸ್ಟ್ ನಲ್ಲಿ ಭಾರತಕ್ಕೆ ತಕ್ಕ ಉತ್ತರ ನೀಡಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಉತ್ತಮ ರನ್ ಕಲೆ ಹಾಕಿದ್ದು, ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 316 ರನ್ ಕಲೆಹಾಕಿದೆ. ಈ ಮೂಲಕ ಇಂಗ್ಲೆಂಡ್ 126 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ಇಂಗ್ಲೆಂಡ್ ತಂಡದ ಪರ ಓಲಿ ಪೋಪ್ (Ollie Pope) ಅಜೇಯ 148 ರನ್ ಹಾಗೂ ರೆಹಾನ್ ಅಹ್ಮದ್ ಅಜೇಯ 16 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
ಭಾರತದ ಪರ ಜಸ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಲಾ ವಿಕೆಟ್ ಪಡೆದಿದ್ದಾರೆ.ಇಂಗ್ಲೆಂಡ್ ತಂಡವು ಭಾರತವನ್ನು 436 ರನ್ ಗಳಿಗೆ ಆಲೌಟ್ ಮಾಡಿತು. ಒಲಿ ಪೋಪ್ ಭಾರತದ ವಿರುದ್ಧ ಮೊದಲ ಶತಕ ಸಿಡಿಸಿದ್ದಾರೆ. ದಿನದಾಟದಂತ್ಯಕ್ಕೆ ಪೋಪ್ 208 ಎಸೆತಗಳನ್ನು ಎದುರಿಸಿ 17 ಬೌಂಡರಿಗಳ ಸಹಿತ ಅಜೇಯ 148 ರನ್ ಗಳಿಸಿದ್ದಾರೆ.
ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 436 ರನ್ ಕಲೆಹಾಕಿತು. ಈ ಮೂಲಕ 190 ರನ್‌ಗಳ ಮುನ್ನಡೆ ಸಾಧಿಸಿತು. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದರು. ಯಶಸ್ವಿ ಜೈಸ್ವಾಲ್ 80 ರನ್, ಕೆಎಲ್ ರಾಹುಲ್ 86 ರನ್ ಮತ್ತು ರವೀಂದ್ರ ಜಡೇಜಾ 87 ರನ್ ಸಿಡಿಸಿದರು.