ಇನ್ನು 30 ದಿನ ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಅಬ್ಬರ..!
2021ರ ಯೂರೋ ಕಪ್ ಫುಟ್ ಬಾಲ್ ಟೂರ್ನಿಗೆ ಜೂನ್ 11ರಿಂದ ಚಾಲನೆ ಸಿಗಲಿದೆ. ರೋಮ್ ನ ಒಲಿಂಪಿಕ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಇಟಲಿ ಮತ್ತು ಟರ್ಕಿ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿವೆ. ಒಟ್ಟು ಆರು ಬಣಗಳಿದ್ದು, ಫುಟ್ ಬಾಲ್ ಪ್ರಿಯರಿಗೆ ಇನ್ನು ಒಂದು ತಿಂಗಳು ರೋಚಕ ಆಟದ ಸವಿಯನ್ನು ಸವಿಯಬಹುದು. ಜುಲೈ 12ರಂದು ಫೈನಲ್ ಪಂದ್ಯ ನಡೆಯಲಿದೆ. ಯೂರೋಪ್ ನ 11 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.
ಎ ಬಣದಲ್ಲಿ ಟರ್ಕಿ, ಇಟಲಿ, ವೇಲ್ಸ್ ಮತ್ತು ಸ್ವೀಜರ್ ಲೆಂಡ್ ತಂಡಗಳು ಹೋರಾಟ ನಡೆಸಲಿವೆ.
ಬಿ ಬಣದಲ್ಲಿ ಡೆನ್ಮಾರ್ಕ್, ಫಿನ್ ಲೆಂಡ್, ಬೆಲ್ಜಿಯಂ ಮತ್ತು ರಷ್ಯಾ ತಂಡಗಳು ಮುಖಾಮುಖಿಯಾಗಲಿವೆ.
ಸಿ ಗುಂಪಿನಲ್ಲಿ ನೆದರ್ಲೆಂಡ್, ಉಕ್ರೇನ್, ಆಸ್ಟ್ರೀಯ ಮತ್ತು ನಾರ್ತ್ ಮೆಕ್ ಡೋನಿಯಾ ತಂಡಗಳು ಕಾದಾಟ ನಡೆಸಲಿವೆ.
ಡಿ ಗುಂಪಿನಲ್ಲಿ ಇಂಗ್ಲೆಂಡ್, ಕ್ರೋವೇಶಿಯಾ, ಸ್ಕಾಟ್ ಲೆಂಡ್, ಚೆಕ್ ಗಣರಾಜ್ಯ ತಂಡಗಳು ಜಟಾಪಟಿ ನಡೆಸಲಿವೆ.
ಇ ಗುಂಪಿನಲ್ಲಿ, ಸ್ಪೇನ್, ಸ್ವೀಡನ್, ಪೋಲೆಂಡ್ ಮತ್ತು ಸ್ಲೋವೇಕಿಯಾ ತಂಡಗಳು ಸ್ಫರ್ಧೆ ನಡೆಸಲಿವೆ.
ಎಫ್ ಗುಂಪಿನಲ್ಲಿ ಹಂಗೇರಿ, ಪೋರ್ಚ್ ಗಲ್, ಫ್ರಾನ್ಸ್ ಮತ್ತು ಜರ್ಮನಿ ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ. ಕೋವಿಡ್ ಮಾರ್ಗಸೂಚಿಯ ಪ್ರಕಾರ ಈ ಟೂರ್ನಿ ನಡೆಯಲಿದೆ.