ಮಗಳ ಮೇಲೆ ಅತ್ಯಾಚಾರವೆಸಗಿದವನನ್ನು ತುಂಡು ತುಂಡಾಗಿ ಕತ್ತರಿಸಿದ ತಂದೆ
ಭೋಪಾಲ್: ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ತಂದೆ ತುಂಡು ತುಂಡಾಗಿ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
14 ವರ್ಷದ ಬಾಲಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ. ತ್ರಿಲೋಕಚಂದ (55) ಕೊಲೆಯಾದ ವ್ಯಕ್ತಿ. ತ್ರಿಲೋಕಚಂದನ್ನು ಕೊಲೆ ಮಾಡಿ ಆತನ ದೇಹವನ್ನು ತುಂಡು, ತುಂಡುಗಳಾಗಿ ಕತ್ತರಿಸಿ ಬಾಲಕಿಯ ತಂದೆ ಮತ್ತು ಆಕೆಯ ತಾಯಿಯ ಚಿಕ್ಕಪ್ಪ ನದಿಗೆ ಅಜ್ನಾಲ್ ಎಸೆದಿದ್ದಾರೆ. ಸಧ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಭಾನುವಾರ ಅಜ್ನಾಲ್ ನದಿಯಲ್ಲಿ ಛಿದ್ರಗೊಂಡಿರುವ ವ್ಯಕ್ತಿಯ ಶವ ತೇಲುತ್ತಿತ್ತು. ಮೃತ ವ್ಯಕ್ತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆ ಕುರಿತಂತೆ ಪೊಲೀಸರು ತನಿಕೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಇದರಿಂದ ಬಾಲಕಿಯ ತಂದೆ, ಆಕೆಯ ತಾಯಿಯ ಚಿಕ್ಕಪ್ಪ ಶನಿವಾರ ತ್ರಿಲೋಕಚಂದ್ನನ್ನು ತಮ್ಮ ಮೋಟಾರ್ಸೈಕಲ್ನಲ್ಲಿ ಅಜ್ನಾಲ್ ನದಿಗೆ ಕರೆದೊಯ್ದು, ಆತನ ಶಿರಚ್ಛೇದ ಮಾಡಿ ಮೀನು ಕತ್ತರಿಸಲು ಬಳಸುವ ಸಾಧನದಿಂದ ಮುಂಡವನ್ನು ಎರಡು ಭಾಗಗಳಾಗಿ ಕತ್ತರಿಸಿದ್ದಾನೆ.
ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ವ್ಯಕ್ತಿ ಆರೋಪಿಗಳ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.