ಲೈಗರ್ – ಸಾಲಾ ಕ್ರಾಸ್ ಬ್ರೀಡ್ ಚಿತ್ರದ ಮೊದಲ ಗ್ಲಿಂಪ್ಸ್ ಔಟ್…
ಸೌತ್ ಸೆನ್ಸೇಷನ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ‘ಲೈಗರ್: ಸಾಲಾ ಕ್ರಾಸ್ಬ್ರೀಡ್’ ಚಿತ್ರದ ಮೊದಲ ಗ್ಲಿಂಪ್ಸ್ ಇಂದು ಬಿಡುಗಡೆಯಾಗಿದೆ.
ವಿಜಯ ದೇವರಕೊಂಡ ಬಾಕ್ಸಿಂಗ್ ಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಪಾತ್ರಕ್ಕಾಗಿ ಮೈಯನ್ನ ಹುರಿಗೊಳಿಸಿಕೊಂಡಿದ್ದಾರೆ. ಬೀಸ್ಟ್ ಮೋಡ್ ನಲ್ಲಿ ಕಂಗೊಳಿಸುತ್ತಿರು ಚಿಕ್ಕ ಜಳಕ್ ಅನ್ನ ಚಿತ್ರತಂಡ ಬಿಡುಗಡೆಮಾಡಿದ್ದು, ಈ ವಿಷಯವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುರಿ ಜಗನಾಥ್ ನಿರ್ದೇಶನದ ಈ ಚಿತ್ರ, ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಕರಣ್ ಜೋಹರ್, ಚಾರ್ಮಿ ಕೌರ್, ಪುರಿ ಜಗನ್ನಾಥ್ ಮತ್ತು ಅಪೂರ್ವ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ಲೈಗರ್’ 25 ಆಗಸ್ಟ್ 2022 ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ 5 ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅನನ್ಯಾ ಚಿತ್ರದಲ್ಲಿ ರಮ್ಯಾ ಕೃಷ್ಣನ್, ವಿಶು ರೆಡ್ಡಿ, ರೋನಿತ್ ರಾಯ್, ಮಕರಂದ್ ದೇಶಪಾಂಡೆ, ಆಲಿ ಮತ್ತು ಗೆಟಪ್ ಶ್ರೀನು ಅವರಂತ ಪ್ರಮುಖ ಕಲಾವಿದರ ತಾರಾಬಳಗವಿದೆ. ಲೆಜೆಂಡರಿ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.