ಆಂಧ್ರ ಪ್ರದೇಶಕ್ಕೆ ‘ಅಮರಾವತಿ’ಯೇ ರಾಜಧಾನಿ
ಆಂಧ್ರಪ್ರದೇಶ ರಾಜ್ಯಕ್ಕೆ 3 ರಾಜಧಾನಿಗಳನ್ನ ಹೊಂದುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವೈ ಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಮಸೂದೆಯನ್ನ ವಾಪಸ್ ತೆಗದುಕೊಳ್ಳುವ ನಿರ್ಧಾರವನ್ನ ಕೈಗೊಂಡಿದೆ.
ವಿಶಾಖಪಟ್ಟಣವನ್ನು ಕಾರ್ಯಾಂಗ, ಅಮರಾವತಿ ಶಾಸಕಾಂಗ, ಕರ್ನೂಲ್ ಅನ್ನು ನ್ಯಾಯಾಂಗದ ರಾಜಧಾನಿಯನ್ನಾಗಿ ಮಾಡುವ ಬಗ್ಗೆ ಸರ್ಕಾರಗಳು ಆಸಕ್ತಿ ತೋರಿಸಿದ್ದವು. ಆದರೆ ಅಮರಾತಿ ನಗರಕ್ಕೆ ಭೂಮಿ ಬಿಟ್ಟುಕೊಟ್ಟ ರೈತರು ಇದಕ್ಕೆ ತೀವ್ರ ವಿರೊಧವನ್ನ ವ್ಯಕ್ತಪಡಿಸಿದ್ದರು. ಮಂಗಳವಾರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ನೇತೃತ್ವದಲ್ಲಿ ನಡೆದ ಸಚಿವ ಸೋಪುಟದಲ್ಲಿ ಈ ನಿರ್ಣಯವನ್ನ ಕೈಗೊಳ್ಳಲಾಗಿದೆ.
ಸೋಮವಾರ ವಿಧಾನಸಭೆಯಲ್ಲಿ ಮೂರು ರಾಜಧಾನಿಗಳನ್ನ ಹೊಂದುವ ಬಗ್ಗೆ ಮಸೂದೆ ಮಂಡಿಸಿ ಅನುಮೋದನೆ ಪಡೆಎದುಕೊಂಡಿದ್ದರು..ಆನಂತರ ಪ್ರತಿಪಕ್ಷಗಳು ಮತ್ತು ರೈತರ ಆಕ್ರೊಶ ಹೆಚ್ಚಿದ ಹಿನ್ನಲೆಯಲ್ಲಿ ಈ ನಿರ್ಣಯವನ್ನ ಅರ್ಧಕ್ಕೆ ಕೈ ಬಿಡಲಾಗಿದೆ. ಈಗಾಗಿ ಆಂದ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿಯೇ ಮುಂದುವರೆಯಲಿದೆ.