ಭಾರತದಲ್ಲಿ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ ಬ್ಯಾನ್…???

1 min read
Cryptocurrency Bitcoin

ಭಾರತದಲ್ಲಿ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ ಬ್ಯಾನ್…???

ಕರ್ನಾಟಕದಲ್ಲಿ ಕೆಲವು ದಿನಗಳಿಂದ ಬಿಟ್ ಕಾಯಿನ್ ಹಗರಣ ಸಾಕಷ್ಟು ಸದ್ದು ಮಾಡಿತ್ತು. ಈಗ ನಾನಾ ಕಾರಣಗಳಿಂದ ರಾಷ್ಟ್ರ ಮಟ್ಟದಲ್ಲೂ ಕ್ರಿಪ್ಟೋ ಕರೆನ್ಸಿಗಳು ಸುದ್ದಿಮಾಡುತ್ತಿವೆ. ಈ ಭಾರಿಯ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದಂತೆ  ಸರ್ಕಾರ ಹೊಸ ಮಸೂದೆಯನ್ನ ಮಂಡಿಸಲಿದೆ. ಈ ಪ್ರಕಾರ ದೇಶದಲ್ಲಿ ಬಿಟ್ ಕಾಯಿನ್ ಸೇರಿದಂತೆ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕರೆನ್ಸಿಯಾಗಿ ಮಾನ್ಯತೆಯಿಲ್ಲ, ಹೂಡಿಕೆಗೆ ಅವಕಾಶ.

ಕೇಂದ್ರ ಸರ್ಕಾರ ಮಂಡಿಸಲಿರುವ  ಮಸೂದೆಯಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನ ಕರೆನ್ಸಿ ಮಾನ್ಯತೆಯನ್ನ ಮಾತ್ರ ರದ್ದು ಮಾಡಲಿದೆ ಎಂದು ತಿಳಿದು ಬಂದಿದೆ. ಆದರೆ  ಹೂಡಿಕೆಯಾಗಿ ಉಪಯೋಗಿಸಲು ಅವಕಾಶವಿದೆ. ಅಲ್ಲದೆ ವರ್ಚುಯಲ್ ಕರೆನ್ಸಿಗನ್ನ ಜಿ ಎಸ್ ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ದವಾಗಿದೆ. ವರ್ಚುಯಲ್ ಕರೆನ್ಸಿಗಳ ಲಾಭವನ್ನ ಕ್ಯಾಪಿಟಲ್ ಗೇನ್ ಎಂದು ಪರಿಗಣಿಸಿ ಟ್ಯಾಕ್ಸ್, ಜಿ ಎಸ್ಟಿ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಭಾರತದದ್ದೆ ಪ್ರತ್ಯೇಕ ಡಿಜಿಟಲ್ ಕರೆನ್ಸಿ

ಈ ಹಿಂದೆ ಸರ್ಕಾರ ಬಿಟ್ ಕಾಯಿನ್ ಗಳ ಮೇಲೆ ಹೂಡಿಕೆ ಮಾಡುವುದನ್ನ ನಿಷೇಧಿಸಿತ್ತು. ಇದರ ವಿರುದ್ದ ಹೂಡಿಕೆದಾರರು  ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು, ಸುಪ್ರೀಂ ಕೋರ್ಟ್ ಈ ನಿಷೇಧವನ್ನ ತೆರವುಗೊಳಿಸಿತ್ತು.RBI ಕಠಿಣ ನಿಲುವುಗಳ ಹೊರತಾಗಿಯೂ ಕ್ರಿಪ್ಟೋ ಕರೆನ್ಸಿ ಗಳ ಮೇಲೆ ಕೇಂದ್ರ ಸರ್ಕಾರ ಹಿಡಿತ ಹೊಂದುವುದು ಕಷ್ಟ ಎನ್ನಲಾಗುತ್ತಿದೆ. ಹಾಗಾಗಿ ಭಾರತ ಸರ್ಕಾರವೇ ಹೊಸದಾಗಿ ಅಧಿಕೃತ ಡಿಜಿಟಲ್ ಕರೆನ್ಸಿಯನ್ನ ಪರಿಚಯಿಸಲಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd