ಹಳಿ ತಪ್ಪಿದ ಬಿಕಾನೆರ್ ಎಕ್ಸ್ಪ್ರೆಸ್ ರೈಲು, 4 ಬೋಗಿಗಳು ಪಲ್ಟಿ…
ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಗುರುವಾರ ಸಂಜೆ 5 ಗಂಟೆಗೆ ರೈಲು ಹಳಿತಪ್ಪಿದ ಕಾರಣ ಬಹುದೊಡ್ಡ ಅಪಘಾತ ಸಂಭವಿಸಿದೆ. ಗುವಾಹಟಿಗೆ ಹೊರಟಿದ್ದ ಬಿಕಾನೆರ್ ಎಕ್ಸ್ಪ್ರೆಸ್ ರಯಲಿನ ನಾಲ್ಕರಿಂದ ಐದು ಬೋಗಿಗಳು ಕೂಚ್ ಬೆಹಾರ್ ಮತ್ತು ಜಲ್ಪೈಗುರಿ ನಡುವೆ ಹಳಿತಪ್ಪಿವೆ.
Guwahati-Bikaner Express 15633 (up) derailed at about 5 pm this evening. Details awaited pic.twitter.com/It93WwAsu8
— ANI (@ANI) January 13, 2022
ಅಪಘಾತದಲ್ಲಿ ಸಾವಿನ ಸಂಖ್ಯೆ ಇನ್ನೂ ಖಚಿತವಾಗಿಲ್ಲವಾದರೂ, ಅಪಘಾತದ ತೀವ್ರತೆಯಿಂದಾಗಿ, ಅನೇಕ ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ. ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಪಲ್ಟಿಯಾದ ಬೋಗಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಿಲುಕಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
15633 ಸಂಖ್ಯೆಯ ರೈಲು ಬಿಕಾನೇರ್ ಎಕ್ಸ್ಪ್ರೆಸ್, ಮಂಗಳವಾರ ರಾತ್ರಿ ರಾಜಸ್ಥಾನದ ಬಿಕಾನೇರ್ನಿಂದ ಹೊರಟಿತ್ತು. ಗುರುವಾರ ಬೆಳಗ್ಗೆ 5.44ಕ್ಕೆ ಪಾಟ್ನಾ ರೈಲು ನಿಲ್ದಾಣದಿಂದ ಹೊರಟ ರೈಲು ಮಧ್ಯಾಹ್ನ 2.32ಕ್ಕೆ ಕಿಶನ್ಗಂಜ್ ತಲುಪಿ ಅಲ್ಲಿಂದ ಗುವಾಹಟಿಗೆ ಹೊರಟಿತು. ಭಾರತೀಯ ರೈಲ್ವೇ ಸಹಾಯವಾಣಿ ಸಂಖ್ಯೆ 8134054999 ಅನ್ನು ಬಿಡುಗಡೆ ಮಾಡಿದೆ. ನೊಂದ ಪ್ರಯಾಣಿಕರೊಬ್ಬರು ಎಎನ್ಐ ಸುದ್ದಿಸಂಸ್ಥೆಗೆ, “ಹಠಾತ್ ಅಪಘಾತ ಸಂಭವಿಸಿದೆ ಮತ್ತು ರೈಲಿನ ಬೋಗಿ ಪಲ್ಟಿಯಾಗಿದೆ. ರೈಲಿನ 2-4 ಬೋಗಿಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.” ಎಂದು ತಿಳಿಸಿದ್ದಾನೆ.
#Shocking| Four to five bogies of Bikaner-Guhawati Express have derailed near Moynaguri, Jalpaiguri district of #WestBengal. The train was going from Patna to Guwahati when it got derailed near Moynaguri. Rescue ops on. pic.twitter.com/cr8v6F1vKY
— Pooja Mehta (@pooja_news) January 13, 2022