ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕಾಂತಾರಕ್ಕೆ ತಟ್ಟಿದ ಧರ್ಮಸ್ಥಳ ಹೋರಾಟದ ಕಿಚ್ಚು; ರಿಷಬ್ ಶೆಟ್ಟಿ ವಿರುದ್ಧ ವಕೀಲ ಜಗದೀಶ್ ಗರಂ, ಸಿನಿಮಾ ನೋಡದಂತೆ ಕರೆ

The heat of the Dharmasthala struggle touched Kantara; Lawyer Jagadish Garam against Rishab Shetty, calls on people not to watch the movie

Shwetha by Shwetha
October 7, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು:ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್‌ 1’ ಚಿತ್ರದ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿರುವಂತೆಯೇ, ಇದೀಗ ಹೊಸ ವಿವಾದವೊಂದು ಚಿತ್ರವನ್ನು ಸುತ್ತಿಕೊಂಡಿದೆ. ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ವಕೀಲ ಜಗದೀಶ್, ಇದೀಗ ನಟ-ನಿರ್ದೇಶಕ ರಿಷಬ್ ಶೆಟ್ಟಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ‘ಕಾಂತಾರ’ ಸಿನಿಮಾವನ್ನು ಬಹಿಷ್ಕರಿಸುವಂತೆ ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಗೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವೀಡಿಯೊಗಳ ಮೂಲಕ ಹೋರಾಟ ನಡೆಸುತ್ತಿರುವ ವಕೀಲ ಜಗದೀಶ್, ತಮ್ಮ ಇತ್ತೀಚಿನ ವೀಡಿಯೊದಲ್ಲಿ ರಿಷಬ್ ಶೆಟ್ಟಿ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಇತ್ತೀಚೆಗೆ ತಮ್ಮ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದೇ ಜಗದೀಶ್ ಅವರ ಕೋಪಕ್ಕೆ ಕಾರಣವಾಗಿದೆ.

Related posts

ದೆಹಲಿಯಲ್ಲಿ ಡಿಕೆಶಿ ಬ್ರಹ್ಮಾಸ್ತ್ರ: ಸಿದ್ದರಾಮಯ್ಯ ಬಣದ ಸಚಿವರಿಗೆ ಕಂಟಕ, ಹೈಕಮಾಂಡ್ ಅಂಗಳದಲ್ಲಿ ಸಚಿವರ ತಲೆದಂಡದ ಪಟ್ಟಿ

ದೆಹಲಿಯಲ್ಲಿ ಡಿಕೆಶಿ ಬ್ರಹ್ಮಾಸ್ತ್ರ: ಸಿದ್ದರಾಮಯ್ಯ ಬಣದ ಸಚಿವರಿಗೆ ಕಂಟಕ, ಹೈಕಮಾಂಡ್ ಅಂಗಳದಲ್ಲಿ ಸಚಿವರ ತಲೆದಂಡದ ಪಟ್ಟಿ

December 5, 2025
Scholarship Alert:ಬಿ.ಎಡ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ, ಸಿಗಲಿದೆ 25,000 ರೂ ಪ್ರೋತ್ಸಾಹಧನ ಇಂದೇ ಅಪ್ಲೈ ಮಾಡಿ

Scholarship Alert:ಬಿ.ಎಡ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ, ಸಿಗಲಿದೆ 25,000 ರೂ ಪ್ರೋತ್ಸಾಹಧನ ಇಂದೇ ಅಪ್ಲೈ ಮಾಡಿ

December 5, 2025

ವೀಡಿಯೊದಲ್ಲಿ ಜಗದೀಶ್ ಹೇಳಿದ್ದೇನು?

ತಮ್ಮ ಆಕ್ರೋಶಭರಿತ ವೀಡಿಯೊದಲ್ಲಿ ಮಾತನಾಡಿರುವ ಜಗದೀಶ್, “ರಿಷಬ್ ಶೆಟ್ಟಿ ತನ್ನ ಫ್ಯಾಮಿಲಿ ಸಮೇತ ಧರ್ಮಸ್ಥಳಕ್ಕೆ ಹೋಗಿದ್ದಾನೆ. ಇಂಥವನ ಚಿತ್ರವನ್ನು ಬೆಂಬಲಿಸಲು ನಿಮಗೆಲ್ಲ ಬುದ್ಧಿ ಇಲ್ವಾ? ಒಬ್ಬ ಬಡ ಹುಡುಗಿಯ ಅತ್ಯಾಚಾರ, ಕೊಲೆಯಾಗಿದೆ. ಆ ನೋವಿನ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ವ್ಯಕ್ತಿಯ ಸಿನಿಮಾವನ್ನು ನೋಡುವ ನೀವು ಎಂಥ ಯಮಘಾತುಕರು,” ಎಂದು ಪ್ರೇಕ್ಷಕರ ವಿರುದ್ಧವೂ ಹರಿಹಾಯ್ದಿದ್ದಾರೆ.

“ಅವನು ಯಾರ ಜೊತೆ ಹೋಗಿ ಫೋಟೋ ತೆಗೆಸಿಕೊಂಡಿದ್ದಾನೆ ಎಂದು ನಾನು ಹೇಳುವುದಿಲ್ಲ. ಆದರೆ ಇದರ ಮೂಲಕ ಜನರಿಗೆ ಯಾವ ಸಂದೇಶವನ್ನು ಕೊಡಲು ಹೊರಟಿದ್ದಾನೆ? ನಾವೆಲ್ಲ ಏನು ದಡ್ಡರಾ? ನಮ್ಮನ್ನು ಗೂಬೆ ಮಾಡಿ, ಹಣ ಮಾಡಿಕೊಂಡು ಅವನು ಕುಟುಂಬದ ಜೊತೆ ಯಾರ ಬಳಿ ಹೋಗಿ ಕೂತಿದ್ದಾನೆ ಎಂಬುದನ್ನು ಒಮ್ಮೆ ಯೋಚನೆ ಮಾಡಿ,” ಎಂದು ರಿಷಬ್ ಶೆಟ್ಟಿ ವಿರುದ್ಧ ಕಿಡಿಕಾರಿದ್ದಾರೆ.

ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವಿಲ್ಲ

‘ಕಾಂತಾರ’ ಸಿನಿಮಾದಲ್ಲಿ ಸಮಾಜಕ್ಕೆ ಪೂರಕವಾದ ಯಾವುದೇ ಉತ್ತಮ ಸಂದೇಶವಿಲ್ಲ ಎಂದು ಆರೋಪಿಸಿರುವ ಜಗದೀಶ್, “ಆ ಕಿತ್ತೋಗಿರೋ ಕಾಂತಾರ ಸಿನಿಮಾ ನೋಡಬೇಡಿ. ಅದರಲ್ಲಿ ಸಮಾಜಕ್ಕೆ ಬೇಕಾದ ಯಾವ ಸಂದೇಶವೂ ಇಲ್ಲ. ಕೇವಲ ಮನರಂಜನೆಯ ಹೆಸರಿನಲ್ಲಿ ನಿಮ್ಮನ್ನು ಮರಳು ಮಾಡಿ ಹಣ ಗಳಿಸಲಾಗುತ್ತಿದೆ. ಆದರೆ, ಆ ಸಿನಿಮಾದ ನಾಯಕ ಸಮಾಜದ ಗಂಭೀರ ಸಮಸ್ಯೆಯ ಬಗ್ಗೆ ಮೌನ ವಹಿಸಿ, ಆರೋಪ ಹೊತ್ತಿರುವವರ ಜೊತೆ ಕಾಣಿಸಿಕೊಳ್ಳುತ್ತಾನೆ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು,” ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ವಕೀಲ ಜಗದೀಶ್ ಅವರ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಸೌಜನ್ಯಾ ಪರ ಹೋರಾಟಗಾರರು ಜಗದೀಶ್ ಹೇಳಿಕೆಯನ್ನು ಬೆಂಬಲಿಸಿದರೆ, ರಿಷಬ್ ಶೆಟ್ಟಿ ಅಭಿಮಾನಿಗಳು ಇದು ವೈಯಕ್ತಿಕ ನಂಬಿಕೆಯ ವಿಚಾರ, ಅದನ್ನು ವಿವಾದ ಮಾಡುವುದು ಸರಿಯಲ್ಲ ಎಂದು ವಾದಿಸುತ್ತಿದ್ದಾರೆ. ಈ ವಿವಾದ ‘ಕಾಂತಾರ ಚಾಪ್ಟರ್‌ 1’ ಚಿತ್ರದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ShareTweetSendShare
Join us on:

Related Posts

ದೆಹಲಿಯಲ್ಲಿ ಡಿಕೆಶಿ ಬ್ರಹ್ಮಾಸ್ತ್ರ: ಸಿದ್ದರಾಮಯ್ಯ ಬಣದ ಸಚಿವರಿಗೆ ಕಂಟಕ, ಹೈಕಮಾಂಡ್ ಅಂಗಳದಲ್ಲಿ ಸಚಿವರ ತಲೆದಂಡದ ಪಟ್ಟಿ

ದೆಹಲಿಯಲ್ಲಿ ಡಿಕೆಶಿ ಬ್ರಹ್ಮಾಸ್ತ್ರ: ಸಿದ್ದರಾಮಯ್ಯ ಬಣದ ಸಚಿವರಿಗೆ ಕಂಟಕ, ಹೈಕಮಾಂಡ್ ಅಂಗಳದಲ್ಲಿ ಸಚಿವರ ತಲೆದಂಡದ ಪಟ್ಟಿ

by Shwetha
December 5, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರಿಗೆ ಸಲ್ಲಿಸಿರುವ ಗೌಪ್ಯ ವರದಿಯೊಂದು ರಾಜ್ಯ...

Scholarship Alert:ಬಿ.ಎಡ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ, ಸಿಗಲಿದೆ 25,000 ರೂ ಪ್ರೋತ್ಸಾಹಧನ ಇಂದೇ ಅಪ್ಲೈ ಮಾಡಿ

Scholarship Alert:ಬಿ.ಎಡ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ, ಸಿಗಲಿದೆ 25,000 ರೂ ಪ್ರೋತ್ಸಾಹಧನ ಇಂದೇ ಅಪ್ಲೈ ಮಾಡಿ

by Shwetha
December 5, 2025
0

ಬೆಂಗಳೂರು: ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು, ಬಿ.ಎಡ್ (B.Ed) ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ...

ಸಂಕ್ರಾಂತಿ ಕ್ರಾಂತಿ ಕೋಡಿಶ್ರೀಗಳ ಸ್ಫೋಟಕ ಭವಿಷ್ಯಕ್ಕೆ ಬೆಚ್ಚಿಬಿದ್ದ ರಾಜಕೀಯ ವಲಯ ಹೈಕಮಾಂಡ್ ನಡೆಗೆ ಸಿದ್ದರಾಮಯ್ಯ ಶರಣಾಗತಿ!?

ಸಂಕ್ರಾಂತಿ ಕ್ರಾಂತಿ ಕೋಡಿಶ್ರೀಗಳ ಸ್ಫೋಟಕ ಭವಿಷ್ಯಕ್ಕೆ ಬೆಚ್ಚಿಬಿದ್ದ ರಾಜಕೀಯ ವಲಯ ಹೈಕಮಾಂಡ್ ನಡೆಗೆ ಸಿದ್ದರಾಮಯ್ಯ ಶರಣಾಗತಿ!?

by Shwetha
December 5, 2025
0

ರಾಜ್ಯ ರಾಜಕೀಯದಲ್ಲಿ ಸದ್ಯದ ವಿದ್ಯಮಾನಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೇಹಭಾಷೆಯಲ್ಲಿನ ಬದಲಾವಣೆಗಳು ಅಚ್ಚರಿ ಮೂಡಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಪ್ರಸಿದ್ಧ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವಾಣಿ...

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 5, 2025
0

ಡಿಸೆಂಬರ್ 05, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಆರ್ಥಿಕವಾಗಿ...

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

by Shwetha
December 4, 2025
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯಾದ ರಾಜಕೀಯ ಶಾಶ್ವತವಲ್ಲ, ಯಾರಪ್ಪನ ಆಸ್ತಿನೂ ಅಲ್ಲ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ - ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ....

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram