500 ರೂಪಾಯಿ ನೋಟಿಗೆ ಸಂಬಂಧಿಸಿದಂತೆ ನೀವು ತಿಳಿದಿರಬೇಕಾದ ಪ್ರಮುಖ ಮಾಹಿತಿ
ಇಂದಿನ ಕಾಲದಲ್ಲಿ, 500 ರೂಪಾಯಿಯ ನೋಟುಗಳನ್ನು ಹೊಂದಿರದ ಯಾವುದೇ ವ್ಯಕ್ತಿಯು ಸಿಗುವುದು ಕಷ್ಟ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ 500 ರೂಪಾಯಿ ನೋಟಿನ ಸುದ್ದಿಯೊಂದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ 500 ರೂಪಾಯಿ ನೋಟು ತೆಗೆದುಕೊಳ್ಳಬಾರದು ಎಂದು ಹೇಳಲಾಗುತ್ತಿದೆ. ಈ ನೋಟಿನಲ್ಲಿ ಹಸಿರು ಪಟ್ಟಿಯು ಆರ್‌ಬಿಐ ರಾಜ್ಯಪಾಲರ ಸಹಿಯ ಬಳಿ ಇರುವುದರ ಬದಲಾಗಿ ಗಾಂಧೀಜಿಯವರ ಚಿತ್ರದ ಬಳಿ ಇದೆ ಎಂದು ಹೇಳಲಾಗಿದೆ.
ಆದರೆ ಇದನ್ನು ವಿಚಾರಣೆ ಮಾಡಿದಾಗ, ಪಿಐಬಿ ಫ್ಯಾಕ್ಟ್ ಚೆಕ್‌ನಲ್ಲಿ ಈ ಸುದ್ದಿ ನಕಲಿ ಎಂದು ತಿಳಿದುಬಂದಿದೆ. ಆರ್‌ಬಿಐ ಪ್ರಕಾರ, ಎರಡೂ ನೋಟುಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಎರಡೂ ನೋಟುಗಳು ಮಾನ್ಯವಾಗಿವೆ. PIBFactCheck ಈ ಸುದ್ದಿಯನ್ನು ನಕಲಿ ಎಂದು ಕರೆದಿದೆ. ಆದ್ದರಿಂದ ನಿಮ್ಮ ಬಳಿ ಮೇಲೆ ತಿಳಿಸಿದ 500 ರೂಪಾಯಿ ನೋಟು ಇದ್ದರೆ ಭಯಪಡುವ ಅಗತ್ಯವಿಲ್ಲ.
ಇದಕ್ಕೂ ಮುನ್ನ ಇಂತಹ ಕೆಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರಲ್ಲಿ 5, 10 ಮತ್ತು 100 ರ ಹಳೆಯ ನೋಟುಗಳನ್ನು ನಿಲ್ಲಿಸಲಾಗುವುದು ಎಂದು ಹೇಳಲಾಗಿತ್ತು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಪ್ರಾರಂಭಿಸಿದ ಕೂಡಲೇ, ಪತ್ರಿಕಾ ಮಾಹಿತಿ ಬ್ಯೂರೋ ಟ್ವೀಟ್ ಮಾಡಿ, ಆರ್‌ಬಿಐ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಹೇಳಿತು. 5, 10 ಮತ್ತು 100 ರ ಹಳೆಯ ನೋಟುಗಳನ್ನು ಅಮಾನ್ಯ ಮಾಡಲಾಗುತ್ತದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಸುದ್ದಿ. ಹೊಸ ಮತ್ತು ಹಳೆಯ ಎರಡೂ ನೋಟುಗಳು ಚಲಾವಣೆಯಲ್ಲಿರುತ್ತವೆ ಎಂದು ಹೇಳಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೇವಿಸಬೇಕಾದ ಹಣ್ಣು ಮತ್ತು ತರಕಾರಿಗಳು#immunity #rainseason https://t.co/Gu4P3MbPKT
— Saaksha TV (@SaakshaTv) June 28, 2021
ನೇಂದ್ರ ಬಾಳೆಕಾಯಿ ಸಿಪ್ಪೆಯ ಬಜ್ಜಿ#Saakshatv #cooking #recipe https://t.co/JzmosmX0TY
— Saaksha TV (@SaakshaTv) July 1, 2021
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz
— Saaksha TV (@SaakshaTv) June 27, 2021
ವೈಟ್ ರೈಸ್ Vs ಬ್ರೌನ್ ರೈಸ್ – ಯಾವುದು ದೇಹಕ್ಕೆ ಉತ್ತಮ – ಇಲ್ಲಿದೆ ಪೌಷ್ಟಿಕತಜ್ಞೆ ನೀಡಿರುವ ಮಾಹಿತಿ#Saakshatv #healthtips #rice https://t.co/tCTUXeFGEs
— Saaksha TV (@SaakshaTv) July 1, 2021
ಬ್ಯಾಂಕಿನ ಯಾವ ಕೆಲಸಗಳನ್ನು ವಾಟ್ಸಾಪ್ ಮೂಲಕ ನಿಭಾಯಿಸಬಹುದು ಮತ್ತು ಅದರ ಪ್ರಕ್ರಿಯೆ ಏನು#WhatsApp #chat https://t.co/0yPB6IOm6y
— Saaksha TV (@SaakshaTv) June 26, 2021
#500rupees #factcheck