ಗುರುದ್ವಾರದ ಮುಖ್ಯಸ್ಥರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿನ ನಾನಕಮಟ್ಟ ಸಾಹಿಬ್ ಗುರುದ್ವಾರದ ಮುಖ್ಯಸ್ಥರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯೇ ಎಸ್‌ಟಿಎಫ್ ಮತ್ತು ಹರಿದ್ವಾರ ಪೊಲೀಸರು ಎನ್‌ಕೌಂಟರ್ ಗೆ ಬಲಿಯಾಗಿದ್ದಾನೆ.
ಗುರುದ್ವಾರದ ಡೇರಾ ಕರ್ ಸೇವಾ ಮುಖ್ಯಸ್ಥ ತಾರ್ಸೆಮ್ ಸಿಂಗ್ ಕುರ್ಚಿಯಲ್ಲಿ ಕುಳಿತಿದ್ದ ವೇಳೆ ಬೈಕ್ ನಲ್ಲಿ ಬಂದ ಸರಬ್ಜಿತ್ ಸಿಂಗ್ ಮತ್ತು ಅಮರ್ ಜಿತ್ ಸಿಂಗ್ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಮುಖ್ಯ ಆರೋಪಿಯೇ ಹತನಾಗಿದ್ದರೆ, ಸಹಚರರು ಪರಾರಿಯಾಗಿದ್ದಾರೆ.
ಉತ್ತರಾಖಂಡದ ಪೊಲೀಸರು ಬಾಬಾ ಹತ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಎಸ್‌ಟಿಎಫ್ ಮತ್ತು ಪೊಲೀಸರು ಇಬ್ಬರೂ ಹಂತಕರಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಮರ್ಜಿತ್ ಸಿಂಗ್ ವಿರುದ್ಧ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.