ಇಂದಿನಿಂದ ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನ(monsoon session) ನಡೆಯಲಿದ್ದು, ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಲಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಕಾಯ್ದೆಗಳನ್ನ ರದ್ದುಗೊಳಿಸುವ ಮಸೂದೆಯನ್ನ ಮಂಡಿಸಲಿದ್ದಾರೆ.
ಕೃಷಿ ಕಾನೂನುಗಳನ್ನ ರದ್ದುಗೊಳಿಸುತ್ತಿರುವುದರಿಂದ ರೈತ ಸಂಘಟನೆಗಳು ಪ್ರತಿಭಟನೆ ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರ ಮನವಿ ಮಾಡಿವೆ. ಆದರೆ ರೈತ ಸಂಘಗಳು (ಎಂ ಎಸ್ ಪಿ) ಕನಿಷ್ಟ ಬೆಂಬಲ ಬೆಲೆ ಸೇರಿದಂತೆ, ರೈತ ಹೋರಾಟದಲ್ಲಿ ಮೃತ ಪಟ್ಟ ರೈತರ ಸ್ಮಾರಕಕ್ಕೆ ಭೂಮಿ ಮಂಜೂರು ಮಾಡುವಂತೆ ಸೇರಿ ಹಲವು ಮನವಿಗಳನ್ನ ಬೇಡಿಕೆ ಇಟ್ಟಿವೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಕೇಂದ್ರ ಸರ್ಕಾರ ಈ ಭಾರಿಯ ಚಳಿಗಾಲದ ಅಧಿವೇಶನದಲ್ಲಿ 26 ಹೊಸ ಮಸೂದೆಗಳನ್ನೂ ಸಹ ಮಂಡಿಸಲಿದೆ. ಕ್ರಿಪ್ಟೋ ಕರೆನ್ಸಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ಬಿಲ್ ಗಳನ್ನ ಕೇಂದ್ರ ಸರ್ಕಾರ ತರಲಿದೆ.








