ರಾಂಚಿ : ತಾಯಿಗೆ ಮಕ್ಕಳೇ ಪ್ರಪಂಚ. ತಾಯಿಯ ಪ್ರೀತಿಯ ಮುಂದೆ ಮತ್ತ್ಯಾವ ಪ್ರೀತಿಯೂ ಇಲ್ಲ. ಆದರೆ, ಇಲ್ಲೊಬ್ಬ ತಾಯಿ ಫೋನ್ ನಲ್ಲಿ ಮಾತನಾಡುವಾಗ ಕಿರಿಕಿರಿ ಮಾಡುತ್ತಿದೆ ಎಂದು ಕೊಲೆ ಮಾಡಿರುವ ಘಟನೆ ನಡೆದಿದೆ.
ಜಾರ್ಖಂಡ್‌ನ ಗಿರಿಧ್ ನಲ್ಲಿ ತಾಯಿಯೊಬ್ಬಳು 2 ವರ್ಷದ ಮಗುವಿನ ಅಳುವಿನಿಂದ ಕಿರಿಕಿರಿಯಾಗಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಬೆಂಗಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಫ್ಸಾನಾ ಖಾತೂನ್ ಕೊಲೆ ಮಾಡಿದ ಮಹಿಳೆ ಎಂದು ಗುರುತಿಸಲಾಗಿದೆ.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಫ್ಸಾನಾ ಖಾತೂನ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ 2 ವರ್ಷದ ಪುತ್ರ ನಿರಂತರವಾಗಿ ಅಳುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ ತನ್ನ 2 ವರ್ಷದ ಪುತ್ರ ಆಸಿಫ್ ಅನ್ಸಾರಿಯನ್ನು ಕೊಲೆ ಮಾಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಮನೆಗೆ ತೆರಳಿ ದೇಹ ವಶಕ್ಕೆ ಪಡೆದು, ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ, ಮಹಿಳೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.