ತಾಯಿಯೊಬ್ಬಳು ಮಗಳನ್ನೇ ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ತಿಂಗಳುಗಳ ಕಾಲ ಫ್ರಿಜ್ ನಲ್ಲಿ ಇರಿಸಿದ್ದ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಸ್ಥಳೀಯ ಸುದ್ದಿ ವಾಹಿನಿಯ ಮಾಹಿತಿಯಂತೆ, 9 ವರ್ಷದ ಮಗಳನ್ನು ಹತ್ಯೆ ಮಾಡಿ, ತುಂಡು ತುಂಡಾಗಿ ಕತ್ತರಿಸಿ ಸುಮಾರು 3 ತಿಂಗಳವರೆಗೆ ಫ್ರಿಜ್ನಲ್ಲಿ ಇರಿಸಿದ್ದಳು ಎನ್ನಲಾಗಿದೆ. 30 ವರ್ಷದ ರುತ್ ಫ್ಲೋರಿಯಾನೊ ಬಂಧಿತ ಮಹಿಳೆಯಾಗಿದ್ದು, ಮಾದಕ ದ್ರವ್ಯ ಸೇವಿಸಿ ಬಾಲಕಿಯನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಸದ್ಯ ಮಹಿಳೆಯ ಇಬ್ಬರು ಮಕ್ಕಳು ಪೊಲೀಸರ ಆರೈಕೆಯಲ್ಲಿದ್ದಾರೆ. ಗೂಗಲ್ನಲ್ಲಿ ಸರ್ಚ್ ಮಾಡಿ ಕತ್ತರಿಸಿದ್ದಾಳೆ ಎನ್ನಲಾಗಿದೆ.
ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದು, ಆತನ ಕುರಿತು ಮಹಿತಿ ಲಭ್ಯವಾಗಿಲ್ಲ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ತಾನು ಆ ವ್ಯಕ್ತಿಯನ್ನು ಭೇಟಿಯಾಗಿದ್ದೆ ಮತ್ತು ಸಿಲ್ವಾ ಕೊಲ್ಲಲ್ಪಟ್ಟ ಸಮಯದಲ್ಲಿಯೇ ಆತನನ್ನು ಆಹ್ವಾನಿಸಿದ್ದೆ ಎಂದು ಹೇಳಿದ್ದಾಳೆ ಎನ್ನಲಾಗಿದೆ.








