ಬೆಂಗಳೂರು: ವ್ಯಕ್ತಿಯೊಬ್ಬ ಸದ್ಯ ಪ್ರೇಮಿಗಳು ಹಾಗೂ ದಂಪತಿಗಳನ್ನು ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹೆಚ್ಎಸ್ಆರ್ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಣೇಶ್ ಬಂಧಿತ ಆರೋಪಿ. ಈತ ಪ್ರೇಮಿಗಳನ್ನು ಹಿಂಬಾಲಿಸಿ ಹೆದರಿಸಿ ಹಣ, ಮೊಬೈಲ್, ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ಚಿನ್ನಾಭರಣ, ಹಣ ವಶಕ್ಕೆ ಪಡೆದಿದ್ದಾರೆ. ಗಣೇಶ ನಕಲಿ ನಕಲಿ ಪೊಲೀಸ್ ಸೋಗಿನಲ್ಲಿ ತೆರಳುತ್ತಿದ್ದ. ಈತ ಪ್ರೇಮಿಗಳು, ದಂಪತಿಯನ್ನೇ ಟಾರ್ಗೆಟ್ ಮಾಡುತ್ತಿದ್ದ. ಪಾರ್ಕ್ ಗಳ ಹತ್ತಿರ ಹೋಗಿ ಬೆದರಿಸುತ್ತಿದ್ದ. ಮಾರಕಾಸ್ತ್ರ ತೋರಿಸಿ ಅವರಿಂದ ಮೊಬೈಲ್, ಹಣ, ಚಿನ್ನ ಕದಿಯುತ್ತಿದ್ದ ಎನ್ನಲಾಗಿದೆ.