ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು – Saaksha Tv
ಬೆಳಗಾವಿ: ಕಣ್ಣಿಗೆ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹದಿನಾರು ಬಾರಿ ಇರಿದು, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಭವಾನಿಗರದಲ್ಲಿ ನಡೆದಿದೆ.
46 ವರ್ಷದ ರಾಜು ಮಲ್ಲಪ್ಪ ದೊಡ್ಡಬಣ್ಣವರ್ ಮೃತ ದುರ್ದೈವಿ. ರಾಜು ಮಂಗಳವಾರ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೋದಾಗ, ರಾಜುವನ್ನು ಅಡಗಟ್ಟಿದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಹದಿನಾರು ಬಾರಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತೀರ್ವ ಗಯಗೊಂಡಿದ್ದ ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಜು ಮೂರು ಜನರನ್ನ ಮದುವೆಯಾಗಿದ್ದ. ಹಾಗಂತ ಯಾರಿಗೂ ವಿಚ್ಛೇದನ ಕೂಡ ನೀಡಿರಲಿಲ್ಲ. ಮದುವೆಯಾದ ವಿಚಾರ ಎಲ್ಲರಿಗೂ ತಿಳಿದಿತ್ತು. ರಾಜು ಮಂಗಳವಾರ ಭವಾನಿ ನಗರದ ಮನೆಯಿಂದ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ವಾಕಿಂಗ್‌ಗೆ ತೆರಳಿದ್ದಾರೆ. ಈ ವೇಳೆ, ಎರಡನೇ ಹೆಂಡತಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ, ಫೋನ್ ತಗೆದಿಲ್ಲ ಅನ್ನೋ ಕಾರಣಕ್ಕೆ ಒಬ್ಬರೇ ವಾಕ್ ಮಾಡಲು ಹೊರಟ್ಟಿದ್ದಾರೆ.
ಮನೆಯಿಂದ ಒಂದು ಕಿಮೀ ಹೋಗುವಷ್ಟರಲ್ಲಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ರಾಜು ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಆತ ಕಾರು ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕಾಲ್ಕಿತ್ತಿದ್ದಾರೆ. ವಾಕಿಂಗ್ ಮಾಡುತ್ತಿದ್ದ ಕೆಲವರು ರಸ್ತೆಯಲ್ಲಿ ಶವ ಬಿದ್ದಿದ್ದನ್ನು ಗಮನಿಸಿ ಬೆಳಗಾವಿ ಗ್ರಾಮೀಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.
ಇತ್ತ ಡಿಸಿಪಿ ರವೀಂದ್ರ ಗಡಾದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಶವವನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.