ಲಕ್ನೋ: ಕೇವಲ 5 ಕೆಜಿ ಉಳ್ಳಾಗಡ್ಡಿಯನ್ನು ಲಂಚವಾಗಿ ಪಡೆದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿರುವ ಘಟನೆ ನಡೆದಿದೆ.
ಲಂಚವಾಗಿ 5 ಕೆಜಿ ಆಲುಗಡ್ಡೆಗೆ (Potatoes) ಬೇಡಿಕೆಯಿಟ್ಟಿದ್ದ ಸಬ್ ಇನ್ ಸ್ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಿರುವ ಈ ಘಟನೆ ಉತ್ತರ ಪ್ರದೇಶದ (Uttar Pradesh) ಕನೌಜ್ ನಲ್ಲಿ ನಡೆದಿದೆ.
ಪ್ರಕರಣ ಇತ್ಯರ್ಥಪಡಿಸುವುದಕ್ಕಾಗಿ ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಲಂಚಕ್ಕಾಗಿ ‘ಆಲೂಗಡ್ಡೆ’ ಎಂಬ ಪದವನ್ನು ಕೋಡ್ ಆಗಿ ಬಳಸಲಾಗಿದೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.
ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಿ ಕನೌಜ್ ಎಸ್ಪಿ ಅಮಿತ್ ಕುಮಾರ್ ಆನಂದ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಈ ಕುರಿತ ತನಿಖೆಗೆ ಆದೇಶಿಸಲಾಗಿದೆ.
ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದು ರೈತ ಹೇಳುತ್ತಾರೆ. 5 ಕೆಜಿ ಬದಲಿಗೆ 2 ಕೆಜಿ ನೀಡುತ್ತೇನೆಂದು ರೈತರ ಹೇಳುತ್ತಾರೆ. ಅದಕ್ಕೆ ಪೊಲೀಸ್ ಅಧಿಕಾರಿ ಕೋಪಗೊಂಡು, ಕೊನೆಗೆ 3 ಕೆಜಿ ಹೇಳುತ್ತಾರೆ.