ನವದೆಹಲಿ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಬಜೆಟ್ ಮಂಡಿಸಿದ್ದು, ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಹಿ ತಿನ್ನಿಸಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಬಜೆಟ್ ಪ್ರತಿ ಸ್ವೀಕರಿಸಿದರು. ಆನಂತರ ಅಧಿಕಾರಿಗಳೊಂದಿಗೆ ಫೋಟೋ ಸೆಷನ್ ನಡೆಯಿತು. ಆಗ ಕೂಡಲೇ ಅವರು ನೇರವಾಗಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿ ಮಾಡಿ ಬಜೆಟ್ (Union Budget 2024) ಮಂಡಿಸಲು ಅನುಮೋದನೆ ಪಡೆದರು. ಈ ಸಂದರ್ಭದಲ್ಲಿ ಅನುಮೋದನೆ ನೀಡಿದ ಮುರ್ಮು ಅವರು, ಸಿಹಿ ತಿನ್ನಿಸಿ ಶುಭ ಹಾರೈಸಿದರು.