ಉತ್ತರ ಪ್ರದೇಶ : ನಗರದಲ್ಲಿ ಈಗ ವಾಹನ ಸವಾರರು ಬೇಕಾಬಿಟ್ಟಿಯಾಗಿ ಓಡಾಡಿದರೆ, ದಂಡ ಕಟ್ಟುವುದು ಶತಸಿದ್ಧ ಎಂಬುವುದು ಎಲ್ಲರಿಗೂ ಗೊತ್ತಿದ್ದರೂ ಹಲವರು ಮಾತ್ರ ಉದ್ಧಟತನ ಮೆರೆಯುತ್ತಾರೆ. ಹೀಗೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ದಂಡ ಕಟ್ಟುವಂತೆ 70 ಬಾರಿ ಚಲನ್ ನೀಡಲಾಗಿದೆ. ಸದ್ಯ ಈ ವ್ಯಕ್ತಿ ತನ್ನ 85 ಸಾವಿರ ಬೈಕ್ ಗೆ ಒಟ್ಟು 70,500 ರೂ. ದಂಡ ಕಟ್ಟಬೇಕಿದೆ.
ಈ ವ್ಯಕ್ತಿ ಕಳೆದ ವರ್ಷವೇ 37 ಬಾರಿ ದಂಡದ ಚಲನ್ ಪಡೆದುಕೊಂಡಿದ್ದ ಎನ್ನಲಾಗಿದೆ. ನಗರದಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಇಲಾಖೆ ಕಠಿಣ ಕ್ರಮ ಜಾರಿಗೊಳಿಸಲು ನಿರ್ಧರಿಸಿದೆ.ಸಾಕಷ್ಟು ಬಾರಿ ದಂಡ ಕಟ್ಟುವಂತೆ ತಪ್ಪಿತಸ್ಥನಿಗೆ ಚಲನ್ ಕಳುಹಿಸಲಾಗಿದೆ. ಈ ಬಗ್ಗೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆತ ನಿಗದಿತ ಸಮಯದೊಳಗೆ ಕಟ್ಟದಿದ್ದರೆ ಬೈಕ್ ನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.








