ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 75ನೇ ಗಣರಾಜ್ಯೋತ್ಸವ (75th Republic Day) ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಅಗಲಿದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಅವರು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಗಮಿಸಿದ್ದರು. ದೇಶೀಯ ಗನ್ ಸಿಸ್ಟಮ್ 105-ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳೊಂದಿಗೆ ನೀಡಲಾದ 21-ಗನ್ ಸೆಲ್ಯೂಟ್‌ನೊಂದಿಗೆ ರಾಷ್ಟ್ರಗೀತೆಯ ನಂತರ ಧ್ವಜಾರೋಹಣ ನಡೆಯಿತು.
105 ಹೆಲಿಕಾಪ್ಟರ್ ಘಟಕದ ನಾಲ್ಕು Mi-17 IV ಹೆಲಿಕಾಪ್ಟರ್‌ಗಳು ಪ್ರೇಕ್ಷಕರ ಮೇಲೆ ಹೂವಿನ ಸುರಿಮಳೆಗೈದವು. 100ಕ್ಕೂ ಅಧಿಕ ಮಹಿಳಾ ಕಲಾವಿದರು ವಿವಿಧ ರೀತಿಯ ತಾಳವಾದ್ಯಗಳನ್ನು ನುಡಿಸುವ ‘ಆವಾಹನ್’ ಬ್ಯಾಂಡ್ ಪ್ರದರ್ಶಿಸಿದರು.