ರಾಯಚೂರು : ಬಿಜೆಪಿ ಅವರೇ ನಮ್ಮ ಊರಿನಲ್ಲಿ ಗಲಾಟೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದವರು ಬಂದರೂ ನಮ್ಮ ಊರಿನ ಜನ ಇದುವರೆಗೂ ಗಲಾಟೆ ಮಾಡಿಲ್ಲ. ಮತಗಳಿಕೆಯ ರಾಜಕಾರಣಕ್ಕಾಗಿ ಅವರೇ ಗಲಾಟೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ನನಗೆ ಜೈಕಾರ ಕೂಗುತ್ತಿದ್ದರು. ಬಿಜೆಪಿಗರು ಸುಮ್ಮನೆ ಹೋಗದೆ ಗಲಾಟೆ ಮಾಡಿದ್ದಾರೆ. ಅವರು ದೂರು ದೂರು ಕೊಟ್ಟರೆ ನಮ್ಮವರು ದೂರು ಕೊಡುತ್ತಾರೆ. ಯಾರೇ ಆಗಲಿ ಪ್ರಚಾರದ ವೇಳೆ ಗಲಾಟೆ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಪ್ರತಾಪ್ ಸಿಂಹ (Pratap Simha) ಯಾರು? ಅವರಿಗೂ ನಮ್ಮ ಕ್ಷೇತ್ರಕ್ಕೂ ಸಂಬಂಧವಿಲ್ಲ. ಜಾತಿ ರಾಜಕೀಯ ಯಾರು ಮಾಡುತ್ತಿದ್ದಾರೆ? ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಎಲ್ಲಾ ವರ್ಗಗಳಿಗೂ ಯೋಜನೆಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.