ಇಸ್ರೇಲ್ ಹಾಗೂ ಹಮಾಸ್ (Israel-Hamas) ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರತೆ ಪಡೆದಿದೆ. ಇಸ್ರೇಲ್ ಗಾಜಾದಲ್ಲಿ(Gaza) ನಿರಂತರ ಒಂದಲ್ಲ ಒಂದು ಕಾರ್ಯಚರಣೆ ನಡೆಯುತ್ತಿದೆ. ಇಸ್ರೇಲ್ ನ್ನು ಕೆಣಕಿದ ಹಮಾಸ್ ಉಗ್ರರನ್ನು ಸರ್ವನಾಶ ಮಾಡುಲು ಇಸ್ರೇಲ್ ಮುಂದಾಗಿದೆ.
ಈಗ ಸೇನೆ ಗಾಜಾದಲ್ಲಿರುವ ಶಾಲೆಯ ಮೇಲೆ ಕಣ್ಣಿಟ್ಟಿದೆ. ಹಮಾಸ್ ತಮ್ಮ ಶಸ್ತ್ರಾಸ್ತ್ರ ತಾಣವಾಗಿ ಮಾಡಿಕೊಂಡಿದೆ ಎಂದು ಒಂದು ವಿಡಿಯೋ ಸಮೇತ ಸಾಕ್ಷ್ಯವನ್ನು ಇಸ್ರೇಲ್ ಇಟ್ಟಿದೆ. ಶಾಲೆಯಲ್ಲಿ ರಾಕೆಟ್ ಲಾಂಚರ್‌ಗಳು ಮತ್ತು ಮಾರ್ಟರ್ ಶೆಲ್‌ಗಳನ್ನು ಪತ್ತೆಯಾಗಿವೆ ಎನ್ನಲಾಗಿದೆ. ಈ ಕುರಿತು ಒಂದು ವಿಡಿಯೋವನ್ನು ಎಕ್ಸ್ ನಲ್ಲಿ ಇಸ್ರೇಲ್ ಹಂಚಿಕೊಂಡಿದೆ.
ಆರ್‌ಪಿಜಿಗಳು, ಮಾರ್ಟರ್ ಶೆಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಐಡಿಎಫ್ ಪಡೆ ಉತ್ತರ ಗಾಜಾದ ಶಿಶು ವಿಹಾರ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಪತ್ತೆ ಮಾಡಿದೆ. ಎಕ್ಸ್ನಲ್ಲಿ ಹಂಚಿಕೊಂಡ ಮತ್ತೊಂದು ಪೋಸ್ಟ್ನಲ್ಲಿ ಶಾಲೆಯಿಂದ ವಶಪಡಿಸಿಕೊಂಡ ರಾಕೆಟ್ ಲಾಂಚರ್‌ಗಳು ಮತ್ತು ಮದ್ದುಗುಂಡುಗಳ ಫೋಟೋ ಕಾಣಬಹುದು.