ಕೊಪ್ಪಳ: ಪಾಪಿಯೊಬ್ಬ ಅನ್ನ ಹಾಕುತ್ತಿದ್ದ ಮಾಲೀಕರ ಮಗನನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಕುಕನೂರು(Kuknoor) ಪಟ್ಟಣದಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಾಲು ಮಾಲೀಕನ ಮಗನನ್ನೇ ಕೊಲೆ ಮಾಡಿದ್ದಾನೆ. ಪ್ರಜ್ವಲ್ ಕೊಲೆಯಾದ ಮಾಲೀಕನ ಮಗ.
ಆರೋಪಿ ಶಂಕರ್, ಅಪ್ರಾಪ್ತರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ವಿಡಿಯೋ ರೆಕಾರ್ಡ್ ಮಾಡಿ, ನಂತರ ಅದನ್ನು ತೋರಿಸಿ ಅವರಿಂದ ಹಣ ಪೀಕುತ್ತಿದ್ದ. ಹೀಗೆ ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮಗನಿಗೂ ಮಾಡಿ, ಹಣ ಕೇಳಿದ್ದಾನೆ. ಆದರೆ, ಅದಕ್ಕೆ ಬಾಲಕ ಹಣ ನೀಡಿರಲಿಲ್ಲ. ಇದೇ ಕಾರಣಕ್ಕೆ ಪ್ರಜ್ವಲ್ನನ್ನ ಬಾವಿಗೆ ತಳ್ಳಿ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಹೀಗೆ ಕೊಲೆ ಮಾಡಿ ಸ್ವತಃ ಪ್ರಜ್ವಲ್ ತಂದೆಗೆ ಕರೆ ಮಾಡಿ ಶಂಕರ್ ಹೇಳಿದ್ದ. ಅಲ್ಲದೇ, ಇದನ್ನು ನೋಡಿದ್ದ ಯುವಕರಿಗೂ ಬೆದರಿಕೆ ಹಾಕಿದ್ದ. ಶಂಕರ್ ಮೇಲೆ ಅನುಮಾನ ಇದ್ದ ಹಿನ್ನೆಲೆಯಲ್ಲಿ ಬಾಲಕನ ತಂದೆ ಠಾಣೆಗೆ ದೂರು ಸಲ್ಲಿಸಿದ್ದರು. ನಂತರ ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ.