ಹಣದಾಸೆಗೆ ಕಾರು ಚಾಲಕನ ಬರ್ಬರ ಕೊಲೆ

1 min read

 

ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯಿಂದ  ಸುಮಾರು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕ್ಯಾಬ್ ಚಾಲಕ ರಾಹುಲ್ ಶ್ರೀವಾಸ್ತವ್  ಅಸ್ಥಿಪಂಜರವನ್ನು ಪೊಲೀಸರು ಬುಧವಾರ ಪತ್ತೆ ಮಾಡಿದ್ದಾರೆ.

22 ವರ್ಷದ ರಾಹುಲ್ ಶ್ರೀವಾಸ್ತವ್ ಕೆಲದಿನಗಳಿಂದ ಮನೆಗೆ ಹಿಂತಿರುಗದ ಕಾರಣಕ್ಕೆ  MGM ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವರದಿಯನ್ನು ಆಗಸ್ಟ್ 2 ರಂದು ದಾಖಲಿಸಿದ್ದರು ಐಪಿಸಿಯ ಸೆಕ್ಷನ್ 365  ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಪ್ರಕರಣದ ತನಿಖೆ ಶುರುಮಾಡಿದರು.

ಸುಧೀರ್ ಕುಮಾರ್ ಶರ್ಮಾ ಮತ್ತು ಆತನ ಸಹಚರ ರವೀಂದ್ರ ಮಹತೋ (21) ಎಂಬ ಶಂಕಿತ ವ್ಯಕ್ತಿಗಳನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ, ಕಾರನ್ನು ಮಾರಾಟ ಮಾಡುವ ಉದ್ದೇಶದಿಂದ ಜಿಲ್ಲೆಯ ಚಾಂಡಿಲ್ ಅಣೆಕಟ್ಟಿನ ಬಳಿ ಇಬ್ಬರು ಆ್ಯಪ್ ಕ್ಯಾಬ್ ಚಾಲಕನ ತಲೆಗೆ ಕಲ್ಲಿನಿಂದ ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡರು ಎಂದು ಇನ್ಸ್‌ಪೆಕ್ಟರ್ ಕಮ್-ಆಫೀಸರ್-ಇನ್-ಚಾರ್ಜ್ ಮಿಥಿಲೇಶ್ ಕುಮಾರ್ ಹೇಳಿದ್ದಾರೆ.

ಕೊಲೆ ನಂತರ ಮೃತದೇಹವನ್ನು ಕಾಡಿನಲ್ಲಿ ಬಿಟ್ಟು ಕಾರು ಮತ್ತು ಮೊಬೈಲ್ ನೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅವರ ಹೇಳಿಕೆಯನ್ನು ಆಧರಿಸಿ, ಪೊಲೀಸ್ ತಂಡವು ಕಾಡಿನಲ್ಲಿ  ಅಸ್ಥಿಪಂಜರವನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd