ಚಾಮರಾಜನಗರ: ವರದಕ್ಷಿಣೆ ನೀಡಿಲ್ಲ ಎಂಬ ಕಾರಣಕ್ಕೆ ಅಳಿಯನೊಬ್ಬ ಬೈಕ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಚಾಮರಾಜನಗರ(Chamarajanagar)ದ ಗಾಳಿಪುರದ ಅಬ್ದುಲ್ ಕಲಾಂ ನಗರದಲ್ಲಿ ಈ ಘಟನೆ ನಡೆದಿದೆ. ಕಳೆದ ಏಳು ತಿಂಗಳ ಹಿಂದೆಯಷ್ಟೇ ಹತೀಜಾ ಖೂಬ್ರಳ ಜತೆ ಸಲ್ಮಾನ್ ಮೊಹಮ್ಮದ್ ಷರೀಫ್ ಎಂಬುವವನ ಮದುವೆಯಾಗಿತ್ತು. ಮದುವೆಯಾದ ನಂತರ ಈ ವ್ಯಕ್ತಿ ಹಣ ಹಾಗೂ ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಆದರೆ, ಮಾವನ ಮನೆಯವರಿಗೆ ಅವುಗಳನ್ನೆಲ್ಲ ನೀಡಲು ಆಗಿಲ್ಲ. ಹೀಗಾಗಿ ತಡರಾತ್ರಿ ಮಾವನ ಮನೆ ಮುಂದೆ ನಿಲ್ಲಿಸಿದ್ಥ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ಈ ಸಂದರ್ಭದಲ್ಲಿ ಬುದ್ಧಿವಾದ ಹೇಳಲು ಬಂದಿದ್ದ ಅತ್ತೆಯ ಕೈಯನ್ನೂ ಮುರಿದಿದ್ದಾನೆ. ಹಿಂದೆ ಅಳಿಯನ ಇಂತಹ ಕಿರುಕುಳಕ್ಕೆ ಬೇಸತ್ತಿದ್ದ ಮಾವನ ಮನೆಯವರು ಚಾಮರಾಜನಗರ ಟೌನ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ವಿಚಾರಣೆ ನಡೆಸಿರಲಿಲ್ಲ. ಸದ್ಯ ಅಳಿಯನ ಆಟಾಟೋಪಕ್ಕೆ ತಕ್ಕ ಶಾಸ್ತಿ ಮಾಡುವಂತೆ ನೊಂದ ಕುಟುಂಬದವರು ಮನವಿ ಮಾಡಿದ್ದಾರೆ.