ಬೆಂಗಳೂರು : ಮದ್ಯಪಾನ (Liquor Drinking) ಮಾಡುವುದಕ್ಕೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಗೋವಿಂದರಾಜನಗರ ಪೊಲೀಸ್ ಠಾಣಾ (Govindarajanagar Police Station) ವ್ಯಾಪ್ತಿಯಲ್ಲಿ ನಡೆದಿದೆ. ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಬಸವರಾಜು (60) ಕೊಲೆಯಾದ ದುರ್ದೈವಿ. ಆಟೋ ಚಾಲಕನಾಗಿದ್ದ ಮಗ ನೀಲಾಧರ ಕೊಲೆ ಮಾಡಿರುವ ಪಾಪಿ ಮಗ.
ಮಾರೇನಹಳ್ಳಿ ಪಿಎಸ್ ಬಡಾವಣೆಯ ಶೆಡ್ ವೊಂದರಲ್ಲಿ ಕೊಲೆಯಾದ 15 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗೋವಿಂದರಾಜನಗರ ಪೊಲೀಸರು ತನಿಖೆ ನಡೆಸಿದ್ದರು. ಆಗ ಮಗನಿಂದಲೇ ತಂದೆ ಹತ್ಯೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.