‘ಪ್ರತಿಜ್ಞಾ ದಿನ’ ಕಾರ್ಯಕ್ರಮಕ್ಕೆ ಅನುಮತಿ ಬೇಕಿಲ್ಲ : ಕಾರ್ಯಕರ್ತರಿಗೆ ಡಿಕೆಶಿ ಸಂದೇಶ

DKSHI

ಬೆಂಗಳೂರು : ಜುಲೈ 02 ರಂದು ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಪದಗ್ರಹಣ ಕಾರ್ಯಕ್ರಮಕ್ಕೆ ಭರದ ತಯಾರಿ ನಡೆದಿದ್ದು, ನೇರಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ 7,831 ಕಡೆ ವರ್ಚುವಲ್ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ. ಇದರ ಹೊರತು ಈವರೆಗೆ 1,000 ಹೆಚ್ಚುವರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಕೋರಿಕೆ ಬಂದಿವೆ. ಜತೆಗೆ, ನೇರಪ್ರಸಾರ ವೀಕ್ಷಣೆಗೆ ಲಿಂಕ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಪ್ರಮುಖ ನಾಯಕರೆಲ್ಲರೂ ವಿಡಿಯೋ ಸಂದೇಶದ ಮೂಲಕ ತಾವಿರುವ ಸ್ಥಳದ ಸಮೀಪ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಈ ಮಧ್ಯೆ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.

ವಿಡಿಯೋದಲ್ಲಿ.. ಜುಲೈ 2ರಂದು ನಡೆಯಲಿರುವ ‘ಪ್ರತಿಜ್ಞಾ ದಿನ’ ಕಾರ್ಯಕ್ರಮಕ್ಕೆ ತಾವೆಲ್ಲ ಸಜ್ಜಾಗಿದ್ದೀರಿ, ಯಾವುದೇ ಪಂಚಾಯಿತಿ, ವಾರ್ಡ್, ಕ್ಷೇತ್ರಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದು ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂದೇಶ ಕಳುಹಿಸಿದ್ದಾರೆ.

“ವ್ಯಕ್ತಿಗತ ಅಂತರ ಕಾಯ್ದುಕೊಂಡು ಕಡಿಮೆ ಜನರು ಸೇರಿ ಕಾರ್ಯಕ್ರಮ ನಡೆಸಬಹುದು ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಿಮ್ಮನ್ನು ಭೇಟಿ ಮಾಡುತ್ತೇನೆ. ವ್ಯಕ್ತಿಗತ ಅಂತರ ಅಗತ್ಯವಿರುವುದರಿಂದ ತಾವೆಲ್ಲ ನೇರವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ನಾವು ನೀಡಿರುವ ನಂಬರ್ ಗೆ ಮಿಸ್ ಕಾಲ್ ನೀಡಬೇಕು, ಅದೇ ನೀವು ನನಗೆ ಮಾಡುವ ಆಶೀರ್ವಾದ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This