Price Hike: ಏಪ್ರಿಲ್ 1 ರಿಂದ ಜನರಿಗೆ ಬಿಗ್ ಶಾಕ್ | ಏರಿಕೆಯಾಗಲಿವೆ ಅಗತ್ಯ ವಸ್ತುಗಳ ಬಲೆ

1 min read
Price Hike Saaksha Tv

ಏಪ್ರಿಲ್ 1 ರಿಂದ ಜನರಿಗೆ ಬಿಗ್ ಶಾಕ್ | ಏರಿಕೆಯಾಗಲಿವೆ ಅಗತ್ಯ ವಸ್ತುಗಳ ಬಲೆ

ನವದೇಹಲಿ: ಏಪ್ರಿಲ್ 1 ಹೊಸ ಆರ್ಥಿಕ ವರ್ಷ ಜನರಿಗೆ ಬಿಗ್ ಶಾಕ್ ನೀಡಲಿದೆ. ಯುಗಾದಿ ಹಬ್ಬದ ಹೊತ್ತಿನಲ್ಲೇ ಅಗತ್ಯ ವಸ್ತುಗಳು ಏರಿಕೆಯಾಗಲಿವೆ.

ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ಮತ್ತು ಹೋಟೆಲ್ ಊಟ, ತಿಂಡಿ ಏರಿಕೆಯಾಗಲಿದೆ. ಬಜೆಟ್ ಘೋಷಣೆಯ ಅನ್ವಯ 350 ವಸ್ತುಗಳು ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆಯಾಗಲಿದೆ. ಕೃತಕ ಆಭರಣಗಳು, ಛತ್ರಿ, ಹೆಡ್ಪೋನ್, ಸೋಲಾರ್ ಸೆಲ್, ಎಲೆಕ್ಟ್ರಾನಿಕ್ ಆಟಿಕೆಗಳ ಬಿಡಿಭಾಗಗಳು ಸೇರಿದಂತೆ ಹಲವು ಉತ್ಪನ್ನಗಳು ದುಬಾರಿಯಾಗಿವೆ.

ಇನ್ನೂ ಅಗತ್ಯ ಔಷಧಿಗಳ ದರದಲ್ಲಿ ಶೇ 1 ರಷ್ಟು ಏರಿಕೆಯಾಗಲಿದೆ. ರಾಷ್ಟ್ರೀಯ ಔಷಧಿ ದರ ಪ್ರಾಧಿಕಾರದಿಂದ 800 ಅಗತ್ಯ ಔಷಧಗಳ ದರ ಏರಿಕೆಗೆ ಅನುಮತಿ ನೀಡಲಾಗಿದೆ. ನೋವು ನಿವಾರಕ ಟಿ ಬಯೋಟಿಕ್ ಔಷಧಗಳ ದರ ಏರಿಕೆಯಾಗಲಿದೆ. ಅಲ್ಲದೇ ಮನೆ ಖರೀದಿ, ಹೋಟೆಲ್ ತಿಂಡಿ, ಊಟ, ಕಾರ್ ಉಕ್ಕು ದುಬಾರಿಯಾಗಲಿವೆ.

ಇನ್ನೂ ಇಳಿಕೆಯಾಗುವ ವಸ್ತುಗಳು ಮೊಬೈಲ್, ಮೊಬೈಲ್ ಕ್ಯಾಮೆರಾ ಲೆನ್ಸ್, ಬಟ್ಟೆ, ಚಪ್ಪಲಿ, ಪಾಲಿಶ್ ಮಾಡಿದ ವಜ್ರ, ಚರ್ಮದ ಉತ್ಪನ್ನ ಮತ್ತು ಕೃಷಿ ಸಲಕರಣೆಗಳು ಇಳಿಕೆಯಾಗಲಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd