ದೇಶ ದೇಶಗಳನ್ನೆ ಆತಂಕಕ್ಕೆ ನೂಕಿದ ಕೋವಿಡ್ ರೂಪಾಂತರಿ ಓಮಿಕ್ರಾನ್
ಯುನೈಟೆಡ್ ಕಿಂಗ್ಡಮ್, ಜರ್ಮನಿ ಮತ್ತು ಇಟಲಿ ದೇಶಗಳು ಓಮಿಕ್ರಾನ್ ರೂಪಾಂತರಿ ಕರೋನವೈರಸ್ ಹರಡಿರುವ ಬಗ್ಗೆ ದೃಢಪಡಿಸಿವೆ. ಈ ರೂಪಾಂತರವು ದಕ್ಷಿಣ ಆಫ್ರಿಕಾದ ದೇಶಗಳ ಮೇಲೆ ಪ್ರಯಾಣ ನಿಷೇಧ ವಿಧಿಸಲು ಹಲವಾರು ದೇಶಗಳನ್ನ ಪ್ರೇರೇಪಿಸಿದೆ, ಇತರ ದೇಶಗಳು COVID-19 ರ ಹರಡುವಿಕೆಯನ್ನು ತಡೆಯಲು ಮತ್ತೊಮ್ಮೆ ಲಾಕ್ ಡೌನ್ ಮೊರೆ ಹೋಗಿದ್ದಾರೆ. ಓಮಿಕ್ರಾನ್ ರೂಪಾಂತರವು ಕಳೆದ ವಾರ ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಬೆಲ್ಜಿಯಂ, ಇಸ್ರೇಲ್ ಮತ್ತು ಹಾಂಗ್ ಕಾಂಗ್ನಲ್ಲಿಯೂ ಪ್ರಯಾಣಿಕರಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಯುರೋಪ್ನಲ್ಲಿ ಹಲವಾರು ಪ್ರಕರಣಗಳು ಕಂಡುಬಂದಿದ್ದರಿಂದ ವಿಜ್ಞಾನಿಗಳು ಹೊಸ ಕರೋನವೈರಸ್ ರೂಪಾಂತರವನ್ನು ಅಧ್ಯಯನ ಮಾಡಿದಾಗ, ಇದು ಮೊದಲು ಹೊರಹೊಮ್ಮಿದ್ದು ದಕ್ಷಿಣ ಆಫ್ರಿಕಾದದಲ್ಲಿ ಎಂದು ತಿಳಿದು ಬಂದಿತ್ತು. ಆ ನಂತರ ದಕ್ಷಿಣಾ ಆಫಿಕಾಕ್ಕೆ ಪ್ರಯಾಣ ನಿರ್ಬಂಧಗಳನ್ನು ಹೇರಲಾಗಿತ್ತು. ಹೊಸ ರೂಪಾಂತರ, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಇಟಲಿ ಮತ್ತು ಬೆಲ್ಜಿಯಂನಲ್ಲಿ ಪ್ರಕರಣಗಳು ಪತ್ತೆಯಾದ ನಂತರ ಯುರೋಪ್ ದೇಶಗಳಾಂದ್ಯಂತ ಹೈ ಅಲರ್ಟ್ಗೆ ವಹಿಸಲಾಯಿತು. ಜೆಕ್ ರಿಪಬ್ಲಿಕ್, ಆಸ್ಟ್ರಿಯಾ, ಇಸ್ರೇಲ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳು ಈ ರೂಪಾಂತರದ ಎಲ್ಲಾ ಶಂಕಿತ ಪ್ರಕರಣಗಳನ್ನ ತನಿಖೆ ಮಾಡುತ್ತಿವೆ.