ಬೆಂಗಳೂರು: ಹಾಡು ಹಾಕುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ನಗರದ ಲಿಂಗರಾಜಪುರ ಜಾತ್ರೆಯೊಂದರಲ್ಲಿ ಕನ್ನಡ ಮತ್ತು ತಮಿಳು ಹಾಡುಗಳನ್ನು ಹಾಕುವ (Kannada vs Tamil songs) ವಿಚಾರವಾಗಿ ಸ್ನೇಹಿತರ ಮಧ್ಯೆ ಜಗಳ ಶುರುವಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.
ಹಳೇ ಬಾಗಲೂರು ಲೇಔಟ್ ನಿವಾಸಿ ಪ್ರವೀಣ್ ಎಂಬವರ ಮೇಲೆ ಅವರ ಸ್ನೇಹಿತ ಹೆಲ್ಮೆಟ್ನಿಂದ ಹಲ್ಲೆ ನಡೆಸಿದ್ದಾನೆ. ದಾಳಿಯ ವೇಳೆ ಪ್ರವೀಣ್ ಅವರ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಪ್ರವೀಣ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಈ ಹಿಂದೆಯೂ ಹಲವಾರು ಬಾರಿ ಆತ ಸ್ನೇಹಿತರೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ. 2021 ರಲ್ಲಿ, ಅವರು ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿದ್ದು, ಈ ಕುರಿತು ಎಫ್ ಐಆರ್ ದಾಖಲಾಗಿತ್ತು ಎನ್ನಲಾಗಿದೆ.